ಮದುವೆ ಮನೆಯಲ್ಲಿ ಕಿಚ್ಚು ಹಚ್ಚಿದ ದಂಪತಿ ನೃತ್ಯ: ವಿಡಿಯೋ ವೈರಲ್​

ಮಧ್ಯ ವಯಸ್ಸಿನ ದಂಪತಿ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಈ ಅಭಿನಯದ ಸಮಯದಲ್ಲಿ, ದಂಪತಿ ತಮ್ಮ ನೃತ್ಯವು ಶೀಘ್ರದಲ್ಲೇ ಇಷ್ಟೊಂದು ವೈರಲ್​ ಆಗುತ್ತದೆ ಎಂದೂ ನಿರೀಕ್ಷಿಸಿದಂತಿಲ್ಲ. ಈ ಜೋಡಿ ಪೆಪ್ಪಿ ಟ್ರ್ಯಾಕ್‌ನಲ್ಲಿ ತಮ್ಮ ನೃತ್ಯದೊಂದಿಗೆ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ.

ಈ ದಂಪತಿ ನಡುವಿನ ಕೆಮೆಸ್ಟ್ರಿ ಚೆನ್ನಾಗಿದ್ದು, ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ಆಕರ್ಷಕವಾದ ಮತ್ತು ತಮಾಷೆಯ ಚಲನೆಗಳು ನೆಟ್ಟಿಗರ ಮನಸ್ಸಿಗೆ ಮುದ ನೀಡುತ್ತವೆ. ಸೂಪರ್​ ಜೋಡಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.

ಈ ವಿಡಿಯೋದಲ್ಲಿ ವಯಸ್ಸಾದ ಪುರುಷನು ನೃತ್ಯ ಸಂಯೋಜನೆಯನ್ನು ಸಲೀಸಾಗಿ ನಿರ್ವಹಿಸುತ್ತಾನೆ. ಆತನ ಪತ್ನಿ ಸ್ವಲ್ಪ ಶ್ರಮ ವಹಿಸಿ ನರ್ತಿಸಿದರೂ ಅದರಲ್ಲಿ ಆಕೆ ಯಶಸ್ವಿಯಾಗುವುದನ್ನು ವಿಡಿಯೋದಲ್ಲಿ ನೋಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read