alex Certify ಪಂಜಾಬಿಗರ ಆತಿಥ್ಯಕ್ಕೆ ಮನಸೋತ ಅಮೆರಿಕನ್​ ಯೂಟ್ಯೂಬರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿಗರ ಆತಿಥ್ಯಕ್ಕೆ ಮನಸೋತ ಅಮೆರಿಕನ್​ ಯೂಟ್ಯೂಬರ್​

ಅಮೃತಸರ: ಪಂಜಾಬ್​ನ ಅಮೃತಸರದ ಪವಿತ್ರ ಗೋಲ್ಡನ್ ಟೆಂಪಲ್‌ಗೆ ಇತ್ತೀಚೆಗೆ ಭೇಟಿ ನೀಡಿದ ಅಮೆರಿಕನ್ ಯೂಟ್ಯೂಬರ್ ಅವರು ಪಂಜಾಬಿ ಸಮುದಾಯದಿಂದ ಸ್ವೀಕರಿಸಿದ ಆತಿಥ್ಯದಿಂದ ಆಶ್ಚರ್ಯಚಕಿತರಾಗಿದ್ದಾರೆ. ಸುತ್ತಮುತ್ತಲಿನ ಅವರ ವ್ಲಾಗ್ ಪ್ರವಾಸದಲ್ಲಿ, ಕ್ಸಿಯೋಮಾನಿಕ್ ಅರೀಹ್ ಸ್ಮಿತ್ ಅವರು ಅಪರಿಚಿತರೊಂದಿಗೆ ಸಂವಹನ ನಡೆಸುತ್ತಿದ್ದರು. ಆದರೆ ಯೂಟ್ಯೂಬರ್ ಪಂಜಾಬಿ ಮಾತನಾಡುವ ಪ್ರಯತ್ನದಿಂದ ಗಮನ ಸೆಳೆದಿದ್ದಾರೆ.

ಅವರು ಶೇರ್​ ಮಾಡಿಕೊಂಡಿರುವ ವಿಡಿಯೋದಲ್ಲಿ ಜನರ ಸಾಲು, ಪಂಜಾಬಿ ಮಾತನಾಡುವ ವಿದೇಶಿಯರನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಅವರಲ್ಲಿ ಹಲವರು ಭಾಷೆಯನ್ನು ಎಲ್ಲಿಂದ ಕಲಿತರು ಎಂದು ಕೇಳುತ್ತಿದ್ದಾರೆ. ಪ್ರಶ್ನೆಗೆ ಉತ್ತರಿಸುವಾಗ, ಯೂಟ್ಯೂಬರ್ ತಾವು ಇಂಟರ್ನೆಟ್‌ನಿಂದ ಕಲಿತಿರುವುದಾಗಿ ಹೇಳಿದ್ದಾರೆ.

ಆಶ್ಚರ್ಯಚಕಿತರಾದ ಇನ್ನೊಂದು ವಿಷಯವೆಂದರೆ ಯೂಟ್ಯೂಬರ್​ಗೆ ಸ್ಥಳೀಯ ವ್ಯಾಪಾರಿಗಳು ಉಚಿವ ಆಹಾರ ನೀಡಿದ್ದರು. “ನಾನು ಇತ್ತೀಚೆಗೆ ಭಾರತದ ಅಮೃತಸರಕ್ಕೆ ಭೇಟಿ ನೀಡಿದ್ದೆ. ಅಲ್ಲಿಯ ಜನರು ಉಚಿತ ವಸ್ತುಗಳನ್ನು ನೀಡಿದ್ದನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ. ನನ್ನ ಪಂಜಾಬಿ ಭಾಷೆ ಭಯಾನಕವಾಗಿದ್ದರೂ ನಾನು ಪಂಜಾಬಿ ಮಾತನಾಡುವಾಗ ಜನರು ತುಂಬಾ ಆಶ್ಚರ್ಯಪಟ್ಟರು” ಎಂದು ತಮ್ಮ ಬ್ಲಾಗ್​ನಲ್ಲಿ ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...