HomeIndiaBIG NEWS: ವಿಮಾನ ದುರಂತ; ಐವರು ಭಾರತೀಯರು ಸೇರಿ 72 ಜನ ಸಜೀವ ದಹನ

BIG NEWS: ವಿಮಾನ ದುರಂತ; ಐವರು ಭಾರತೀಯರು ಸೇರಿ 72 ಜನ ಸಜೀವ ದಹನ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಐವರು ಭಾರತೀಯ ಪ್ರಯಾಣಿಕರು ಸೇರಿದಂತೆ ಎಲ್ಲಾ 72 ಜನರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸೇತಿ ನಡಿಯಲ್ಲಿ ವಿಮಾನ ಪತನಗೊಂಡಿದೆ. ಕಠ್ಮಂಡುವಿನಿಂದ ಪೋಖರಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಯೆಟಿ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಪತನಗೊಂಡು ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ 72 ಜನರು ಸಜೀವದಹನಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಮಾನದಲ್ಲಿ ನಾಲ್ವರು ಸಿಬ್ಬಂದಿಗಳು, ಐವರು ಭಾರತೀಯ ಪ್ರಯಾಣಿಕರು, 53 ಜನ ನೇಪಾಳಿ ಪ್ರಯಾಣಿಕರು, ಜರ್ಮನಿಯ ಇಬ್ಬರು, ಕೊರಿಯಾದ ಇಬ್ಬರು, ಐರ್ಲ್ಯಾಂಡ್ ನ ಓರ್ವ, ರಷ್ಯಾದ ನಾಲ್ವರು, ಅರ್ಜಂಟೀನಾ, ಫಾನ್ಸ್ ಮೂಲದ ತಲಾ ಒಬ್ಬರು ಸೇರಿ 72 ಜನರು ಸಾವನ್ನಪ್ಪಿದ್ದಾರೆ.

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಐವರಲ್ಲಿ ನಾಲ್ವರು ಮಹಾರಾಷ್ಟ್ರದ ಥಾಣೆ ಮೂಲದ ಕುಟುಂಬದವರಾಗಿದ್ದು, ಅಶೋಕ್ ಕುಮಾರ್ ತ್ರಿಪಾಠಿ, ಪತ್ನಿ ವೈಭವಿ ಹಾಗೂ ಮಕ್ಕಳಾದ ಧನುಷ್, ರಿತಿಕಾ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular