ರಾಷ್ಟ್ರಪತಿಗಳ ಪಾದ ಸ್ಪರ್ಶಿಸಲು ಹೋಗಿ ಕೆಲಸ ಕಳೆದುಕೊಂಡ ಮಹಿಳಾ ಉದ್ಯೋಗಿ 15-01-2023 12:17PM IST / No Comments / Posted In: Latest News, India, Live News ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಅವರ ಪಾದ ಸ್ಪರ್ಶಿಸಲು ಮುಂದಾಗಿದ್ದ ಉದ್ಯೋಗಿಯೊಬ್ಬರು ಈಗ ಅಮಾನತ್ತಾಗಿದ್ದಾನೆ. ರಾಜಸ್ಥಾನದಲ್ಲಿ ಜನವರಿ 4ರಂದು ಈ ಘಟನೆ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರೋಹಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಕೌಟ್ಸ್, ಗೈಡ್ ಜಾಂಬೋರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಇಂಜಿನಿಯರ್ ಅಂಬಾ ಸಿಯೋಲ್ ಎಂಬವರು ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಮುರ್ಮು ಅವರ ಪಾದಸ್ಪರ್ಶಕ್ಕೆ ಮುಂದಾಗಿದ್ದರು. ಅನುಮತಿ ಇಲ್ಲದಿದ್ದರೂ ರಾಷ್ಟ್ರಪತಿಯವರ ಬಳಿ ಬಂದಿದ್ದು ಭದ್ರತಾ ಲೋಪ ಎಂದು ಪರಿಗಣಿಸಿ ಅವರನ್ನು ಈಗ ಅಮಾನತು ಮಾಡಲಾಗಿದೆ. A female engineer, who touched the feet of President Draupadi Murmu, has been suspended by the Rajasthan government, Video surfaced#thesummernews #DraupadiMurmu #president pic.twitter.com/U1SehLfY7A — The Summer News (@TheSummerNews2) January 14, 2023