ಬೆಂಗಳೂರು: ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಯಶವಂತಪುರ -ಕೂಚುವೇಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಬೋಗಿ, ವೇಲಾಂಕಣಿ ವಾಸ್ಕೋಡ ಗಾಮ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಬೋಗಿ ಪ್ರತ್ಯೇಕವಾಗಿ ಅಳವಡಿಸಲಾಗುವುದು. ಜನವರಿ 28ರಂದು ಕೆ.ಎಸ್.ಆರ್. ಬೆಂಗಳೂರು –ಎಸ್.ಎಸ್.ಎಸ್. ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುವುದು.
ಜನವರಿ 25 ರಂದು ಯಶವಂತಪುರ –ವಾಸ್ಕೋಡ ಗಾಮ ಎಕ್ಸ್ಪ್ರೆಸ್ ರೈಲಿಗೆ ಸ್ಲೀಪರ್ ಬೋಗಿ ಜೋಡಿಸಲಾಗುತ್ತದೆ. ಜನವರಿ 23 ರಂದು ವಾಸ್ಕೋಡ ಗಾಮ -ವೇಲಾಂಕಣಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜನವರಿ 24ರಂದು ವೇಲಾಂಕಣಿ- ವಾಸ್ಕೋಡ ಗಾಮ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುವುದು.
ಜನವರಿ 15 ರಿಂದ 19 ರವರೆಗೆ ಯಶವಂತಪುರ -ಕೂಚುವೆಲಿ ಎಕ್ಸ್ಪ್ರೆಸ್ ರೈಲಿಗೆ ಒಂದು ಎಸಿ 3 ಟಯರ್ ಸ್ಲೀಪರ್ ಬೋಗಿ, ಜನವರಿ 16 ರಿಂದ 20ರವರೆಗೆ ಕೂಚುವೆಲಿ -ಯಶವಂತಪುರ ಎಕ್ಸ್ಪ್ರೆಸ್ ರೈಲಿಗೆ ಒಂದು ಎಸಿ 3 ಟೈರ್ ಸ್ಲೀಪರ್ ಬೋಗಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.