ನವದೆಹಲಿ: ವಂಚನೆ ಮತ್ತು ತೆರಿಗೆ ವಂಚನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಈಗ ಕೆಲವು ಸಂದರ್ಭಗಳಲ್ಲಿ ಮುಖ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನ್ ಬಳಸಿ ಕೆಲವು ವಾರ್ಷಿಕ ಮಿತಿ ಮೀರಿದ ವೈಯಕ್ತಿಕ ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕ್ಗಳಿಗೆ ಅವಕಾಶ ನೀಡುತ್ತಿದೆ.
ಕೆಲವು ದೊಡ್ಡ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್ ಗಳು ಈ ಆಯ್ಕೆಯನ್ನು ಬಳಸಲು ಪ್ರಾರಂಭಿಸಿವೆ ಪರಿಶೀಲನೆಯು ಕಡ್ಡಾಯವಲ್ಲ. ತೆರಿಗೆ ಉದ್ದೇಶಗಳಿಗಾಗಿ ಬಳಸಲಾಗುವ ಮತ್ತೊಂದು ಸರ್ಕಾರಿ ಗುರುತಿನ ಕಾರ್ಡ್, ಶಾಶ್ವತ ಖಾತೆ ಸಂಖ್ಯೆ(PAN) ಕಾರ್ಡ್ ಅನ್ನು ಬ್ಯಾಂಕ್ ಗಳೊಂದಿಗೆ ಹಂಚಿಕೊಳ್ಳದ ಸಂದರ್ಭಗಳಲ್ಲಿ ಪರಿಶೀಲನೆಗೆ ಅನುಮತಿಸಲಾಗಿದೆ.
ಬ್ಯಾಂಕ್ ಗಳು ಮುಖ ಗುರುತಿಸುವಿಕೆಯನ್ನು ಬಳಸುವ ಅವಕಾಶ ನೀಡಿರುವುದು ಗೌಪ್ಯತೆಗೆ ಧಕ್ಕೆಯಾಗಲಿದೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಗೌಪ್ಯತೆ, ಸೈಬರ್ ಭದ್ರತೆ ಮತ್ತು ಮುಖದ ಗುರುತಿಸುವಿಕೆಗೆ ಮೀಸಲಾದ ಕಾನೂನಿನ ಕೊರತೆಯಿರುವಾಗ ಇಂತಹ ಬೆಳವಣಿಗೆ ಗೌಪ್ಯತೆ ಬಗ್ಗೆ ಪ್ರಶ್ನೆ ಮೂಡಿಸುತ್ತದೆ ಎಂದು ವಕೀಲ ಮತ್ತು ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್ ತಿಳಿಸಿದ್ದಾರೆ.