ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬ್ಯಾಂಕಿಂಗ್ ವಲಯದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‌ಬಿಯು) ಶುಕ್ರವಾರ ಜನವರಿ 30 ರಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು ಘೋಷಿಸಿದೆ.
ಗುರುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಬೇಡಿಕೆಗಳ ಬಗ್ಗೆ ಭಾರತೀಯ ಬ್ಯಾಂಕ್ಗಳ ಸಂಘದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ UFBU ಹೇಳಿಕೆ ಬಿಡುಗಡೆ ಮಾಡಿದೆ.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ವೆಂಕಟಾಚಲಂ ಗುರುವಾರ ಮುಂಬೈನಲ್ಲಿ ಯುಎಫ್‌ಬಿಯು ಸಭೆ ನಡೆಸಲಾಯಿತು. ಪತ್ರಗಳ ಹೊರತಾಗಿಯೂ ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಭಾರತೀಯ ಬ್ಯಾಂಕ್ ಗಳ ಸಂಘದಿಂದ(ಐಬಿಎ) ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಜನವರಿ 30 ಮತ್ತು 31 ರಂದು ಮುಷ್ಕರಕ್ಕೆ ಕರೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಬ್ಯಾಂಕ್ ಮುಷ್ಕರದಿಂದಾಗಿ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕ್ ಭೇಟಿಯನ್ನು ಅದಕ್ಕೆ ಅನುಗುಣವಾಗಿ ಯೋಜಿಸಲು ಸೂಚಿಸಲಾಗಿದೆ.
ಜನವರಿ 28 ತಿಂಗಳ ನಾಲ್ಕನೇ ಶನಿವಾರವಾಗಿರುವುದರಿಂದ, ಈ ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಜನವರಿ 29 ಭಾನುವಾರದಂದು ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇದೆ. ಜನವರಿ 30 ಮತ್ತು 31 ರಂದು ಬ್ಯಾಂಕ್ ಯೂನಿಯನ್‌ಗಳು ಮುಷ್ಕರ ನಡೆಸುವುದರಿಂದ ಸತತ 4 ದಿನಗಳ ಕಾಲ ಗ್ರಾಹಕರು ಸಮಸ್ಯೆ ಎದುರಿಸಬೇಕಾಗಬಹುದು.