ಜನವರಿ 14 ರಿಂದ ಸಿಗಂದೂರಿನಲ್ಲಿ ಚೌಡಮ್ಮ ಜಾತ್ರಾ ಮಹೋತ್ಸವ

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರಿನಲ್ಲಿ ಜನವರಿ 14 ರಿಂದ ಚೌಡಮ್ಮ ಜಾತ್ರಾ ಮಹೋತ್ಸವ ನಡೆಯಲಿದ್ದು, ನಟ ರಾಘವೇಂದ್ರ ರಾಜಕುಮಾರ್ ಇದಕ್ಕೆ ಚಾಲನೆ ನೀಡಲಿದ್ದಾರೆ.

ಅಂದು ಬೆಳಿಗ್ಗೆ ಎರಡು ಗಂಟೆಗೆ ಆಲಯ ಶುದ್ದಿಯೊಂದಿಗೆ ಚೌಡಮ್ಮ ದೇವಿಯ ಮೂಲ ಸ್ಥಳ ಸೀಗೆ ಕಣಿವೆಯಲ್ಲಿ ಧರ್ಮಾಧಿಕಾರಿಗಳ ನೇತೃತ್ವದಲ್ಲಿ ಬೆಳಗ್ಗೆ ಏಳು ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಥಮ ಪೂಜೆ ನಡೆಯಲಿದ್ದು, ನಂತರ ಜ್ಯೋತಿ ರೂಪದಲ್ಲಿ ಮೆರವಣಿಗೆ ಮೂಲಕ ಈಗ ನೆಲೆಯಾಗಿರುವ ಸಿಗಂದೂರಿಗೆ ಅಖಂಡ ಜ್ಯೋತಿ ಆಗಮಿಸಲಿದೆ.

ಮಧ್ಯಾಹ್ನ 2:30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಸಂಜೆ 5:00 ಗಂಟೆಯಿಂದ ಸಾಂಸ್ಕೃತಿಕ ಹಾಗೂ ಗಂಗಾರತಿ ನಡೆಯಲಿದ್ದು, ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿದೆ. ರಾತ್ರಿ 10:30 ರಿಂದ ಶ್ರೀ ಕ್ಷೇತ್ರದ ಮೇಳದಿಂದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.

ಜನವರಿ 15ರ ಭಾನುವಾರ ಬೆಳಗ್ಗೆ 4 ಗಂಟೆಗೆ ದೇವಿಗೆ ಅಭಿಷೇಕ ಪೂಜೆ, ಮಹಾಭಿಷೇಕ ಪೂಜೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಯಿಂದ ಸರಿಗಮಪ, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಪ್ರಸಿದ್ಧ ಗಾಯಕರಿಂದ ಗಾನ ವೈಭವ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read