ಈ ಬಾರಿ ಜನವರಿ 15, ಭಾನುವಾರ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಇದು ಸೂರ್ಯನ ಆರಾಧನೆಯ ಹಬ್ಬವಾಗಿದೆ. ಈ ದಿನವು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸುವ ಪದ್ಧತಿಯಿದೆ.
ಸೂರ್ಯ ಐದು ದೇವತೆಗಳಲ್ಲಿ ಒಬ್ಬ. ಆತ ಗೋಚರ ದೇವ. ಗಣೇಶ, ಶಿವ, ವಿಷ್ಣು, ದುರ್ಗಾ ಮತ್ತು ಸೂರ್ಯ ದೇವನನ್ನು ಎಲ್ಲ ಶುಭ ಕಾರ್ಯಗಳಲ್ಲಿ ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಜಾತಕದಲ್ಲಿ ಸೂರ್ಯನ ಸ್ಥಾನ ಅಶುಭ ಹಾಗೂ ಶುಭ ಫಲಗಳನ್ನು ನೀಡುತ್ತದೆ. ಮಕರ ಸಂಕ್ರಾಂತಿಯಂದು ಅವಶ್ಯಕವಾಗಿ ಸೂರ್ಯನ ಪೂಜೆ ಮಾಡಬೇಕು.
ಜಾತಕದಲ್ಲಿ ಸೂರ್ಯ ಅಶುಭ ಸ್ಥಾನದಲ್ಲಿದ್ದರೆ ಮಕರ ಸಂಕ್ರಾಂತಿಯಂದು ಸೂರ್ಯನ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪನೆ ಮಾಡಿ ಆರಾಧನೆ ಮಾಡಬೇಕು. ಇದು ಸೂರ್ಯ ದೋಷವನ್ನು ಕಡಿಮೆ ಮಾಡುತ್ತದೆ. ಸೂರ್ಯನ ಪ್ರತಿಮೆ ಸ್ಥಾಪನೆಗೂ ಮುನ್ನ ಮಕರ ಸಂಕ್ರಾಂತಿಯಂದು ಬೇಗ ಎದ್ದು ಸ್ನಾನ ಮಾಡಿ ಸೂರ್ಯನಿಗೆ ನಮಸ್ಕರಿಸಿ ಮುಂದಿನ ಕೆಲಸ ಮಾಡಬೇಕು. ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕಾಗುತ್ತದೆ.
ನೀರಿಗೆ ಕುಂಕುಮ ಹಾಗೂ ಕೆಂಪು ಬಣ್ಣದ ಹೂವನ್ನು ನೀರಿಗೆ ಹಾಕಿ ಅರ್ಘ್ಯ ನೀಡಬೇಕು. ಓಂ ಸೂರ್ಯಾಯ ನಮಃ ಮಂತ್ರವನ್ನು ಜಪಿಸಬೇಕು. ಸಂಕ್ರಾಂತಿ ದಿನ ದಾನ ಕೂಡ ವಿಶೇಷತೆ ಪಡೆದಿದೆ.