ಮದುಮಗಳನ್ನು ಬೈಕ್‌ ನಲ್ಲಿ ಕರೆದುಕೊಂಡು ಹೋದ ವರ: ವಿಡಿಯೋ ವೈರಲ್​

ಕೋಲ್ಕತ್ತಾ: ಕ್ಯಾನಿಂಗ್‌ನ ಯುವಕ ಬಿಸ್ವಜಿತ್ ಸರ್ಕಾರ್ ಮದುವೆಯ ನಂತರ ಹೆಂಡತಿಯನ್ನು ಮನೆಗೆ ಬೈಕ್‌ ನಲ್ಲಿ ಕರೆತಂದಿದ್ದಾನೆ. ಇಬ್ಬರೂ ಡೇಟಿಂಗ್ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಹೀಗಾಗಿ ಸಮಾರಂಭದ ಆರಂಭದಲ್ಲೂ ತನ್ನ ಸಂಗಾತಿಯನ್ನು ಮದುವೆಯಾಗಲು ಅದೇ ಬೈಕ್ ನಲ್ಲಿ ತೆರಳಿದ್ದಾನೆ.

ಬಳಿಕ ನವ ವಿವಾಹಿತೆಯೊಂದಿಗೆ ಬೈಕ್‌ನಲ್ಲಿ ಮನೆಗೆ ಮರಳಿದ್ದಾರೆ. ವರನು ತನ್ನ ಬೈಕ್‌ನಲ್ಲಿ ಮದುವೆಗೆ ಹೊರಟಿದ್ದಾನೆ ಎಂಬ ಸುದ್ದಿ ಹರಡಿದ್ದು, ಇದನ್ನು ವೀಕ್ಷಿಸಲು ಜನಸಂದಣಿ ಬೀದಿ ಬದಿಗಳಲ್ಲಿ ಜಮಾಯಿಸಿತ್ತು.

ಕೆಲವರು ತಮ್ಮ ಮೊಬೈಲ್‌ನಲ್ಲಿ ಇಡೀ ಘಟನೆಯ ಫೋಟೋ, ವಿಡಿಯೋಗಳನ್ನು ಸಹ ತೆಗೆದುಕೊಂಡರು. ಬಿಸ್ವಜಿತ್ ಅವರ ತಂದೆ ಅಕ್ಷಯ್ ಸರ್ಕಾರ್ ಅವರು ಕ್ಯಾನಿಂಗ್‌ನ ಮಟ್ಲಾ 2 ಪಂಚಾಯತ್‌ ನಿವಾಸಿಯಾಗಿದ್ದಾರೆ. ಅವರು ತಮ್ಮ ಪತ್ನಿ ಕಾನನ್ ಮತ್ತು ಮಗ ಬಿಸ್ವಜಿತ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಬಿಸ್ವಜಿತ್ ಬಾಲ್ಯದಿಂದಲೂ ಅದ್ಭುತ ವಿದ್ಯಾರ್ಥಿಯಾಗಿದ್ದು ಯಾವಾಗಲೂ ವಿಭಿನ್ನವಾಗಿ ಆಲೋಚಿಸುತ್ತಿದ್ದ ಎಂದು ಪಾಲಕರು ಹೇಳಿದ್ದು, ಈಗ ಮದುವೆಯ ಸುದ್ದಿ ಸದ್ದು ಮಾಡುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read