
ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ ಬಹೊರ್‌ನ ಜೆನ್‌ಪುರ್ಬಸ್‌ನಲ್ಲಿ. ಸುನೀಲ್ ಶರ್ಮಾ ಎಂಬುವವರು ಸಾಕಿದ್ದ ಹಸು ಜನವರಿ 10 ರಂದು ಈ ವಿಶೇಷ ಕರುವಿಗೆ ಜನ್ಮ ನೀಡಿದೆ. ಇನ್ನು ಈ ವಿಶೇಷ ಕರುವಿಗೆ ಚೌತ ಮಾತಾ ಎಂದು ದೇವರ ಹೆಸರನ್ನು ಇಡಲಾಗಿದೆ. ಹಸು ಹಾಗೂ ಕರು ಎರಡೂ ಆರೋಗ್ಯವಾಗಿದ್ದಾವಂತೆ. ಇನ್ನು ಈ ಸುದ್ದಿ ಗೊತ್ತಾಗುತ್ತಿದ್ದಂತೆ ಅಕ್ಕ ಪಕ್ಕದ ಗ್ರಾಮದವರು ಬಂದು ಕರುವನ್ನು ನೋಡಿಕೊಂಡು ಹೋಗುತ್ತಿದ್ದಾರಂತೆ.
ಈ ರೀತಿ ವಿಚಿತ್ರವಾಗಿ ಕರುಗಳ ಜನನ ಯಾಕೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಭ್ರೂಣದ ಬೆಳವಣಿಗೆಯಲ್ಲಿನ ಅಸಹಜತೆಯಿಂದಾಗಿ ಈ ರೀತಿಯಾಗಿ ವಿಚಿತ್ರ ಕರುಗಳು ಹುಟ್ಟುತ್ತವೆ ಅಂತಿದ್ದಾರೆ ವೈದ್ಯ ಪಶು ವೈದ್ಯರಾದ ಡಾ.ಸವಿತಾ ಗೋಸ್ವಾಮಿ. ಇನ್ನು ಇದನ್ನು ದೇವರ ಸೃಷ್ಟಿ ಅಂತಲೂ ಕರೆಯುತ್ತಾರೆ ಅನೇಕರು. ಅದೇನೆ ಇರಲಿ ಇಂಥಹದೊಂದು ವಿಚಿತ್ರ ಕರುಗಳ ಜನನ ಹಿಂದೆಯೂ ಆಗಿದೆ.

