ಮಧ್ಯಪ್ರದೇಶದ ಮೊರೆನಾದಲ್ಲಿ ಮಹಿಳೆಯನ್ನು ಪೊಲೀಸರು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವರಿ 3 ರಂದು ಬರಿಕಾ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಚಾರಣೆಗಾಗಿ ಯಾರನ್ನೋ ಪ್ರಶ್ನಿಸಲು ಹೊರಟಿದ್ದ ಪೊಲೀಸರ ಅಧಿಕೃತ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಮಹಿಳೆಯರ ಎಳೆದೊಯ್ದಿದ್ದಾರೆ ಎಂಬ ಹೇಳಿಕೆಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಮೊರೆನಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೈಸಿಂಗ್ ನರ್ವಾರಿಯಾ ಅವರು ಈ ಬಗ್ಗೆ ವಿವರಿಸಿ, ವಿಚಾರಣೆ ನಡೆಸಲು ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಮಹಿಳೆ ಪೊಲೀಸರ ಕಾರ್ಯಾಚರಣೆಗೆ ಹಸ್ತಕ್ಷೇಪ ಮಾಡಿದ್ದರು. ಮಹಿಳೆ ಜೊತೆ ಸೇರಿದ ಇತರ ಇಬ್ಬರು ಪುರುಷರು ಸಹ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.
ಪ್ರಕರಣವೇನು ?
ಆರೋಪಿ ಸಾಹೇಬ್ ಸಿಂಗ್ ಮನೆಯೊಳಗಿದ್ದು, ಪೊಲೀಸರು ಅವರನ್ನು ಹೊರಗೆ ಕರೆದಾಗ ಅವರ ತಾಯಿ ಬಂದು ಪೊಲೀಸರೊಂದಿಗೆ ಜಗಳವಾಡಿದ್ದಾರೆ. ಆಕೆ ಪೊಲೀಸ್ ಸಿಬ್ಬಂದಿಯ ಕಾಲುಗಳನ್ನ ಹಿಡಿದುಕೊಂಡು ಸಾಹೇಬ್ ಸಿಂಗ್ ಸ್ಥಳದಿಂದ ಓಡಿಹೋಗುವವರೆಗೂ ಪಾದಗಳನ್ನು ಬಿಡಲಿಲ್ಲ. ಈ ವೇಳೆ ಮತ್ತೊಬ್ಬ ಮಹಿಳೆ ಹಾಗೂ ಇಬ್ಬರು ಪುರುಷರು ಕೂಡ ಪೊಲೀಸರೊಂದಿಗೆ ತಳ್ಳಾಟ ಮುಂದುವರಿಸಿದ್ದಾರೆ. ಈ ಸಂಬಂಧ ಸಾಹೇಬ್ ಸಿಂಗ್ ಹಾಗೂ ಮತ್ತೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
https://twitter.com/NCIBHQ/status/1612681990515621894