HomeKarnatakaBIG NEWS: ಹೆಂಡತಿಗೆ ದ್ರೋಹ; ಫೇಸ್ ಬುಕ್ ಯುವತಿಯೊಂದಿಗೆ ಗಂಡನ ಸರಸ-ಸಲ್ಲಾಪ; ನೊಂದ ಪತ್ನಿ ಆತ್ಮಹತ್ಯೆಗೆ...

BIG NEWS: ಹೆಂಡತಿಗೆ ದ್ರೋಹ; ಫೇಸ್ ಬುಕ್ ಯುವತಿಯೊಂದಿಗೆ ಗಂಡನ ಸರಸ-ಸಲ್ಲಾಪ; ನೊಂದ ಪತ್ನಿ ಆತ್ಮಹತ್ಯೆಗೆ ಯತ್ನ

ಕೋಲಾರ: ಕೈಹಿಡಿದ ಮಡದಿಗೆ ದ್ರೋಹ ಬಗೆದು ಫೇಸ್ ಬುಕ್ ನಲ್ಲಿ ಪರಿಚಿತಳಾದ ಬೇರೊಬ್ಬಳ ಜೊತೆ ಪತಿಯ ಸರಸ-ಸಲ್ಲಾಪ ಕಂಡು ಮನನೊಂದ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ನಡೆದಿದೆ.

ಶಶಿಕುಮಾರ್ ಎಂಬಾತ ತನ್ನ ಪತ್ನಿಗೆ ಮೋಸ ಮಾಡಿ ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳತಿ ಹಿಂದೆ ಬಿದ್ದು, ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಫೇಸ್ ಬುಕ್ ಸುಂದರಿ ಜೊತೆಗಿನ ಫೋಟೋಗಳನ್ನು ಅಪ್ ಲೋಡ್ ಮಾಡಿ ಹೆಂಡತಿಗೆ ಹಿಂಸಿಸುತ್ತಿದ್ದ. ಕಳೆದ 4-5 ತಿಂಗಳಿಂದ ಪತಿ ಹಿಂಸೆಯಿಂದ ಮನನೊಂದ ಪತ್ನಿ ಆಶಾರಾಣಿ ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಆಕೆಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular