HomeKarnatakaBIG NEWS: ವೈದ್ಯರ ನಿರ್ಲಕ್ಷಕ್ಕೆ ಯುವಕ ಬಲಿ; ಕುಟುಂಬಸ್ಥರ ಆಕ್ರೋಶ

BIG NEWS: ವೈದ್ಯರ ನಿರ್ಲಕ್ಷಕ್ಕೆ ಯುವಕ ಬಲಿ; ಕುಟುಂಬಸ್ಥರ ಆಕ್ರೋಶ

ಬೆಂಗಳೂರು: ವೈದ್ಯರ ನಿರ್ಲಕ್ಷಕ್ಕೆ ಯುವಕ ಬಲಿಯಾಗಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

24 ವರ್ಷದ ಯುವಕ ಶರತ್ ಕುಡಿದು ಬಿದ್ದು ಕೈಗೆ ಗಾಜು ತಗುಲಿಸಿಕೊಂಡು ಗಾಯಗೊಂಡಿದ್ದ. ತಿವ್ರ ರಕ್ತಸ್ರಾವವಾಗುತ್ತಿದ್ದುದರಿಂದ ಯುವಕನನ್ನು ದಾಸರಹಳ್ಳಿಯ ಮಧು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನಿಗೆ ಸರ್ಜರಿ ಮಾಡಲಾಗಿತ್ತು. ಆದರೆ ಈಗ ಯುವಕ ಏಕಾಏಕಿ ಸಾವನ್ನಪ್ಪಿದ್ದಾನೆ.

ಕಳೆದ ಭಾನುವಾರ ಕುಡಿದು ನೆಲಕ್ಕೆ ಬಿದ್ದಿದ್ದ ಶರತ್ ಕೈಗೆ ಗಾಜು ತಗುಲಿ ನರ ಕಟ್ ಆಗಿತ್ತು. ವೈದ್ಯರು ಸರ್ಜರಿ ಮಾಡಿದ್ದರು. ಸರ್ಜರಿ ಬಳಿಕ ಕುಟುಂಬದ ಜೊತೆ ಯುವಕ ಚೆನ್ನಾಗಿಯೇ ಮಾತನಾಡುತ್ತಿದ್ದ. ಆದರೆ ಈಗ ಆಸ್ಪತ್ರೆಯಲ್ಲಿಯೇ ಯುವಕ ಕೊನೆಯುಸಿರೆಳೆದಿದ್ದಾನೆ. ವೈದ್ಯರ ನಿರ್ಲಕ್ಷವೇ ಯುವಕನ ಸಾವಿಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular