alex Certify ಟಾಟಾ ಮೋಟಾರ್ಸ್​ನಿಂದ ಏಸ್​ ಎಲೆಕ್ಟ್ರಿಕಲ್​ ವಾಹನ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಮೋಟಾರ್ಸ್​ನಿಂದ ಏಸ್​ ಎಲೆಕ್ಟ್ರಿಕಲ್​ ವಾಹನ ಬಿಡುಗಡೆ

Tata Ace EV deliveries begin in India, gets 154 km electric rangeಟಾಟಾ ಮೋಟಾರ್ಸ್, ಕಾರ್ಗೋ ವಾಹನವಾಗಿರುವ ನೂತನ ಏಸ್ ಎಲೆಕ್ಟ್ರಿಕಲ್​ ವಾಹನದ ವಿತರಣೆಯನ್ನು ಪ್ರಾರಂಭಿಸಿದೆ. ಇದರ ಎಕ್ಸ್​ ಷೋರೂಮ್ ಬೆಲೆ 6.60 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಏಸ್ ಇವಿಯ ಮೊದಲ ಉತ್ಪಾದನಾ ಮಾದರಿಗಳನ್ನು FMCG ಮತ್ತು ಅಮೆಜಾನ್, ಡೆಲ್ಲಿವೆರಿ, ಡಿಎಚ್ಎಲ್, ಫೆಡ್ಇಎಕ್ಸ್, MoEVing, ಫ್ಲಿಪ್ ಕಾರ್ಟ್, ಸೇಫ್ ಎಕ್ಸ್ ಪ್ರೆಸ್ ಸೇರಿದಂತೆ ಹಲವು ಕೊರಿಯರ್ ಕಂಪೆನಿಗಳಿಗೆ ತಲುಪಿಸಲಾಗಿದೆ ಎಂದು ಟಾಟಾ ಹೇಳಿದೆ.

ಈ ಕುರಿತು ಟಾಟಾ ಮೋಟಾರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಮಾಹಿತಿ ನೀಡಿದ್ದಾರೆ. ಹೊಸ ಟಾಟಾ ಏಸ್ ಇವಿ 27kW ಮೋಟಾರ್​ನಿಂದ ಚಾಲಿತವಾಗಿದೆ. ಗರಿಷ್ಠ 36 hp ಗರಿಷ್ಠ ಪವರ್ ಮತ್ತು 130 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರಂಭದಲ್ಲಿ, ಟಾಟಾ ಕಂಪನಿ ಹತ್ತು ನಗರಗಳಲ್ಲಿ ಎಲೆಕ್ಟ್ರಿಕ್ ಮಿನಿ ಟ್ರಕ್ ಅನ್ನು ಪರಿಚಯಿಸಿದ್ದು, ದೆಹಲಿ, ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಮಾರಾಟ ಮಾಡಲಿದೆ.

ಮೇ 2022ರಲ್ಲಿ ಬಿಡುಗಡೆಯಾದ ಏಸ್ ಇವಿ 5 ವರ್ಷಗಳ ಮೆಂಟೇನೆನ್ಸ್​ ಪ್ಯಾಕೇಜ್ ಹೊಂದಿದೆ. ಏಸ್ ಇವಿಯು EVOGEN ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಒಂದೇ ಚಾರ್ಜಿನಲ್ಲಿ ಗರಿಷ್ಠ 154 ಕಿ.ಮೀ. ರೇಂಜ್ ನೀಡಲಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೇ, ಇದು ಡ್ರೇವಿಂಗ್ ರೇಂಜ್ ಅನ್ನು ಹೆಚ್ಚಿಸಲು ರೆಜೆನೆರೇಟಿವ್ ಬ್ರೇಕಿಂಗ್ ಸಿಸ್ಟಮ್ ಮತ್ತು ಸುಧಾರಿತ ಬ್ಯಾಟರಿ ಕೂಲಿಂಗ್ ವ್ಯವಸ್ಥೆ ಹೊಂದಿದೆ. ಈ ವಾಹನವು ನಿಯಮಿತ ಮತ್ತು ವೇಗದ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...