ʼಭಾರತ್ ಜೋಡೋʼ ಯಾತ್ರೆಯುದ್ದಕ್ಕೂ ಟೀ ಶರ್ಟ್; ತಮಗೇಕೆ ಚಳಿಯಾಗುತ್ತಿಲ್ಲವೆಂಬ ಗುಟ್ಟುಬಿಚ್ಚಿಟ್ಟ ರಾಹುಲ್ 11-01-2023 9:09AM IST / No Comments / Posted In: Latest News, India, Live News ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಚಳಿಯಲ್ಲೂ ಯಾತ್ರೆಯುದ್ದಕ್ಕೂ ಟೀ- ಶರ್ಟ್ ಮಾತ್ರ ಧರಿಸಿ ಸಂಚರಿಸ್ತಿರೋದು ಭಾರೀ ಸದ್ದುಮಾಡಿದೆ. ನಿಮ್ಮ ಸೋದರನಿಗೆ ಸ್ವೆಟರ್ ಧರಿಸಲು ಹೇಳಿ ಎಂದು ಪ್ರಿಯಾಂಕ ಗಾಂಧಿಯವರಿಗೂ ಕಾಂಗ್ರೆಸ್ ಕಾರ್ಯಕರ್ತರು ಕೇಳಿಕೊಂಡಿದ್ದರು. ಆದರೆ ಯಾತ್ರೆಯುದ್ದಕ್ಕೂ ತಾನು ಟೀ- ಶರ್ಟ್ ಧರಿಸಿ ಸಂಚರಿಸ್ತಿರೋದು ಏತಕ್ಕಾಗಿ ಎಂಬುದರ ಹಿಂದಿನ ಕಾರಣವನ್ನ ರಾಹುಲ್ ಗಾಂಧಿ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಭಾರತ್ ಯಾತ್ರಾ ವೇಳೆ ಹರಿದ ಬಟ್ಟೆಯಲ್ಲಿ ನಡುಗುತ್ತಿದ್ದ ಮೂವರು ಬಡ ಹುಡುಗಿಯರನ್ನು ಭೇಟಿಯಾದ ನಂತರ ಯಾತ್ರೆಯಲ್ಲಿ ಕೇವಲ ಟೀ ಶರ್ಟ್ ಧರಿಸಲು ನಿರ್ಧರಿಸಿದ್ದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. “ಈ ಬಿಳಿ ಟಿ-ಶರ್ಟ್ ಅನ್ನು ಏಕೆ ಧರಿಸಿದ್ದೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ನನಗೆ ಚಳಿಯಾಗುವುದಿಲ್ಲ, ನಾನು ಕಾರಣವನ್ನು ಹೇಳುತ್ತೇನೆ. ಯಾತ್ರೆ ಪ್ರಾರಂಭವಾದಾಗ ಕೇರಳದಲ್ಲಿ ಬಿಸಿ ಮತ್ತು ಆರ್ದ್ರವಾಗಿತ್ತು. ಆದರೆ ನಾವು ಮಧ್ಯಪ್ರದೇಶವನ್ನು ಪ್ರವೇಶಿಸಿದಾಗ ಸ್ವಲ್ಪ ಚಳಿ ಇತ್ತು. ಒಂದು ದಿನ ಹರಿದ ಬಟ್ಟೆಯಲ್ಲಿದ್ದ ಮೂವರು ಬಡ ಹೆಣ್ಣು ಮಕ್ಕಳು ನನ್ನ ಬಳಿಗೆ ಬಂದರು. ನಾನು ಅವರನ್ನು ನೋಡಿದಾಗ, ಅವರು ಸರಿಯಾದ ಬಟ್ಟೆಯನ್ನು ಧರಿಸಿರಲಿಲ್ಲ ಹಾಗೂ ಅವರು ನಡುಗುತ್ತಿದ್ದರು. ಅಂದೇ ನಾನು ಇನ್ಮುಂದೆ ನಡುಗುವುದಿಲ್ಲ ಎಂದು ನಿರ್ಧರಿಸಿದೆ ಎಂದರು. इस टी-शर्ट से बस इतना इज़हार कर रहा हूं, थोड़ा दर्द आपसे उधार ले रहा हूं। pic.twitter.com/soVmiyvjqA — Rahul Gandhi (@RahulGandhi) January 9, 2023