HomeKarnatakaBIG NEWS: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

BIG NEWS: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

ಇಲ್ಲಿನ ಹರವೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಣ್ಣಸ್ವಾಮಿ ನಾಯಕ್ (48) ಕೊಲೆಯಾದ ದುರ್ದೈವಿ. ಸಣ್ಣಸ್ವಾಮಿ ನಾಯಕ್ ಸ್ನೇಹಿತ ಕುಮಾರ್ ನಾಯಕ್ ಕೊಲೆ ಮಾಡಿರುವ ಆರೋಪಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಡಿದ ಅಮಲಿನಲ್ಲಿ ಸಣ್ಣಸ್ವಾಮಿ ಕುಮಾರ ನಾಯಕನನ್ನು ಕಿಚಿಯಾಸಿದ್ದಾನೆ. 37 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ. ಯಾರೂ ಹುಡುಗಿ ಕೊಡುತ್ತಿಲ್ಲ ಎಂದು ಹೇಳಿದ್ದಾನೆ. ವೈಯಕ್ತಿಕ ವಿಚಾರವಾಗಿ ಕೀಟಲೆ ಮಾಡಿದ್ದಕ್ಕೆ ಅವಮಾನಗೊಂಡ ಕುಮಾರ ನಾಯಕ್, ಜಗಳ ಮಾಡಿದ್ದಾನೆ. ಕೈಗೆ ಸಿಕ್ಕ ಚಾಕುವಿನಿಂದ ಸಣ್ಣಸ್ವಾಮಿಯನ್ನು ಇರಿದಿದ್ದಾನೆ. ಸ್ಥಳದಲ್ಲೇ ಸಣ್ಣಸ್ವಾಮಿ ಸಾವನ್ನಪ್ಪಿದ್ದಾನೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular