alex Certify ಅನುಭವಿಗಳಿಗೆ ಅನ್ಯಾಯ: ಅತಿಥಿ ಉಪನ್ಯಾಸಕರ ಅಳಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಭವಿಗಳಿಗೆ ಅನ್ಯಾಯ: ಅತಿಥಿ ಉಪನ್ಯಾಸಕರ ಅಳಲು

ಬೆಂಗಳೂರು: ಯುಜಿಸಿ ನಿಯಮಾವಳಿ ಪ್ರಕಾರ ಪದವಿ ಕಾಲೇಜುಗಳಲ್ಲಿ ಪಾಠ ಮಾಡಲು ನೆಟ್ ಕಡ್ಡಾಯ. ಇದರೊಂದಿಗೆ ಕೋರ್ಸ್ ವರ್ಕ್ ಸಮೇತ ಪಿಹೆಚ್‌ಡಿ ಕಡ್ಡಾಯಗೊಳಿಸಲಾಗಿದೆ. 2009ರ ಹಿಂದಿನ ಎಂಫಿಲ್ ಪದವಿ ಪಡೆದವರನ್ನು ಕೂಡ ಉಪನ್ಯಾಸಕರಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ಮೂರು ಅರ್ಹತೆಗಳಲ್ಲಿ ಯಾವುದಾದರೂ ಒಂದು ಪದವಿ ಇದ್ದರೆ ಅವರು ಪ್ರಾಧ್ಯಾಪಕರಾಗಲು ಅರ್ಹರು. ಆದರೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಮಾತ್ರ ಈ ಮೂರೂ ಅರ್ಹತೆಗಳನ್ನು ಪರಿಗಣಿಸಲಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಈ ಮೂರು ಅರ್ಹತೆಗಳ ಪೈಕಿ ಯಾವುದಾದರೂ ಒಂದು ಅರ್ಹತೆ ಪರಿಗಣಿಸಿದಲ್ಲಿ ಅನುಭವ ಹೊಂದಿದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುವುದು ತಪ್ಪುತ್ತದೆ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.

ಅಂದ ಹಾಗೆ, ಪದವಿ ಕಾಲೇಜುಗಳಲ್ಲಿ 2022 -23ನೇ ಸಾಲಿಗೆ ಖಾಲಿ ಇರುವ ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಕಾಲೇಜು ಶಿಕ್ಷಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ವರ್ಷದ ಆಯ್ಕೆ ವಿಧಾನ ಅನುಸರಿಸಲಾಗುತ್ತಿದ್ದರೂ, ಅನುಭವಕ್ಕೆ ಸಂಬಂಧಿಸಿದ ವಿಚಾರ ಮತ್ತು ಅಂಕ ಪರಿಗಣನೆ ಮಾನದಂಡದಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಲಾಗಿದೆ.

ಅಭ್ಯರ್ಥಿಗಳ ಅನುಭವವನ್ನು ದಿನಗಳು ಮತ್ತು ತಿಂಗಳು ಲೆಕ್ಕದಲ್ಲಿ ನೀಡಬೇಕೆಂದು ಸೂಚಿಸಲಾಗಿದ್ದು, ಅನುಭವ ಪತ್ರದ ಮಾದರಿ ಹಿಡಿದುಕೊಂಡು ಅತಿಥಿ ಉಪನ್ಯಾಸಕರಾಗಬಯಸುವ ಅಭ್ಯರ್ಥಿಗಳು ಕಾಲೇಜುಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಇದಲ್ಲದೇ, ಅಂಕಗಳ ವಿಚಾರ ಕೂಡ ಗೊಂದಲದ ಗೂಡಾಗಿದೆ. ಪಿಜಿ ಶೇಕಡ 25, ಅನುಭವ ವರ್ಷಕ್ಕೆ 3 ಅಂಕಗಳಂತೆ 16 ವರ್ಷಕ್ಕೆ 48 ಅಂಕ, ಪಿ.ಹೆಚ್.ಡಿ. 12 ಅಂಕ, ನೆಟ್, ಸ್ಲೆಟ್ 9 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಇವುಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಪ್ರಕಟಿಸಲಾಗುತ್ತದೆ. ಜನವರಿ 10 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಬೇಕು ಪಿ.ಹೆಚ್.ಡಿ., ಸ್ಲೆಟ್, ನೆಟ್, ಎಂಫಿಲ್ ಅರ್ಹತೆ ಹೊಂದಿದವರಿಗೆ ಎಲ್ಲವನ್ನು ಪರಿಗಣಿಸುವ ಬದಲು ಅತಿ ಹೆಚ್ಚು ಅಂಕ ಬರುವ ಅರ್ಹತೆ ಪರಿಗಣಿಸಬೇಕು. 18 -20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಕಾಲೇಜುಗಳ ಮುಂದೆ ಪ್ರತಿವರ್ಷ ಪ್ರಮಾಣ ಪತ್ರ ಹಿಡಿದುಕೊಂಡು ಅಲೆದಾಡುವ ಪರಿಸ್ಥಿತಿ ಹೋಗಿಲ್ಲ. ಕಳೆದ ವರ್ಷವೇ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದು, ಅದೇ ದಾಖಲೆಗಳನ್ನು ಪರಿಗಣಿಸಬಹುದು ಎಂಬ ಅಭಿಪ್ರಾಯ ಅತಿಥಿ ಉಪನ್ಯಾಸಕರಿಂದ ಕೇಳಿಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...