HomeEntertainmentದೆಹಲಿ ಹಾರರ್ ನಲ್ಲಿ ಮೃತಪಟ್ಟ ಅಂಜಲಿ ಕುಟುಂಬಕ್ಕೆ ಶಾರುಖ್ ಖಾನ್ ಸಂಸ್ಥೆಯ ನೆರವು

ದೆಹಲಿ ಹಾರರ್ ನಲ್ಲಿ ಮೃತಪಟ್ಟ ಅಂಜಲಿ ಕುಟುಂಬಕ್ಕೆ ಶಾರುಖ್ ಖಾನ್ ಸಂಸ್ಥೆಯ ನೆರವು

ದೆಹಲಿಯಲ್ಲಿ ಹೊಸ ವರ್ಷಾಚರಣೆಯಂದು ಭೀಕರ ಅಪಘಾತಕ್ಕೀಡಾಗಿ ಮೃತಪಟ್ಟ 20 ವರ್ಷದ ಯುವತಿ ಅಜಲಿ ಕುಟುಂಬಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ನೆರವಾಗಿದ್ದಾರೆ.

ಕಂಝಾವಾಲಾದಲ್ಲಿ 20 ವರ್ಷದ ಅಂಜಲಿ ಸಿಂಗ್ ಎಂಬ ಯುವತಿ ಕ್ರೂರ ಹಿಟ್ ಅಂಡ್ ರನ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದು, ಎಸ್‌ಆರ್‌ಕೆ ಆಕೆಯ ಕುಟುಂಬಕ್ಕಾಗಿ ಉದಾರ ದೇಣಿಗೆ ನೀಡಿದ್ದಾರೆ.

ಶಾರುಖ್ ಖಾನ್ ಅವರ ಮೀರ್ ಫೌಂಡೇಶನ್, ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಬಹಿರಂಗಪಡಿಸದ ಮೊತ್ತವನ್ನು ದೇಣಿಗೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಜಲಿ ತನ್ನ ತಾಯಿ ಮತ್ತು ಒಡಹುಟ್ಟಿದವರ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದರು. ಮೀರ್ ಫೌಂಡೇಶನ್‌ನ ಸಹಾಯವು ಅಂಜಲಿ ಕುಟುಂಬಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಅಂಜಲಿ ತಾಯಿಯ ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ವೆಚ್ಚದ ಜೊತೆಗೆ ಅಂಜಲಿಯ ಒಡಹುಟ್ಟಿದವರಿಗೆ ನೆರವಾಗುವ ನಿಟ್ಟಿನಲ್ಲಿ ಪರಿಹಾರವನ್ನು ನೀಡುತ್ತಿದೆ.

ಮೀರ್ ಫೌಂಡೇಶನ್ ಶಾರುಖ್ ಖಾನ್ ಅವರ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಅವರ ಹೆಸರಿನ ಒಂದು ಲೋಕೋಪಕಾರಿ ಪ್ರತಿಷ್ಠಾನವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular