ಯಾವುದೇ ಔಷಧ ಸೇವಿಸುವಾಗ ಸಣ್ಣ ಮಕ್ಕಳು ಹಠ ಮಾಡುವುದು ಸಹಜ. ಹಾಗೆಂದು ಜ್ವರ ಅಥವಾ ಕೆಮ್ಮಿನಂಥ ಸಮಸ್ಯೆಗಳು ಕಡಿಮೆಯಾಗಬೇಕಲ್ಲವೇ..? ಹಾಗಾಗಿ ಮಕ್ಕಳಿಗೆ ಔಷಧ ಕೊಡುವಾಗ ಹೀಗೆ ಮಾಡಿ.
ಹಠ ಹಿಡಿಯುವಾಗ ಕೈ ಕಾಲು ಕಟ್ಟಿ ಮದ್ದು ಕುಡಿಸಿದರೆ ಅದು ಬಾಯಿಯಿಂದ ಹೊರಹಾಕುವ ಸಾಧ್ಯತೆಯೇ ಹೆಚ್ಚು. ಇಲ್ಲವೇ ಮೂಗಿಗೆ ಹೋಗಿ ಮತ್ತಷ್ಟು ಕೆಮ್ಮು ಬರಬಹುದು. ಇದನ್ನು ತಪ್ಪಿಸಲು ಸಮಾಧಾನದಿಂದ ಮಕ್ಕಳಿಗೆ ಔಷಧ ನೀಡಿ. ಅವರಿಗಿಷ್ಟವಾದ ಟಾಯ್ ಕೈಗೆ ಕೊಡಿ. ಇಲ್ಲವೇ ರೈಮ್ಸ್ ಹಾಕಿಸಿಟ್ಟು ಮದ್ದು ಬಾಯಿಗೆ ಹಾಕಿ ಬಿಡಿ.
ಮಕ್ಕಳು ಕಣ್ಣು ಮುಚ್ಚಿ ತೆರೆಯುವುದರೊಳಗೆ ಔಷಧ ಬಾಯೊಳಗೆ ಹೋಗಿರಬೇಕು. ತುಸು ದೊಡ್ಡವರಾದ ಮೇಲೆ ಅವರಿಗಿಷ್ಟದ ಉಡುಗೊರೆ ನೀಡುವ ಆಮಿಷವೊಡ್ಡಿ. ಇದನ್ನು ಕುಡಿದರೆ ಪಾರ್ಕ್ ಗೆ ಕರೆದೊಯ್ಯುವುದಾಗಿ ಹೇಳಿ.