ಶಾಲೆಯಲ್ಲಿದ್ದಾಗ ಮಗ್ಗಿಯನ್ನು ನಾವೆಲ್ಲರೂ ಕಂಠಪಾಠ ಮಾಡಿರುತ್ತೇವೆ. ಸುಲಭವಾಗಿ ಲೆಕ್ಕ ಬಿಡಿಸಬೇಕೆಂದರೆ ಸರಾಗವಾಗಿ ಮಗ್ಗಿ ಹೇಳಲು ಬರಬೇಕು.
ಹೀಗೆ ಕಂಠಪಾಠ ಮಾಡುವಾಗ ಒಂಬತ್ತರ ಅಂಕಿಯ ಮಗ್ಗಿಯಲ್ಲಿರುವ ಒಂದು ವಿಶೇಷತೆಯನ್ನು ನೀವು ಗಮನಿಸಿದ್ದೀರಾ ?
9*1=9
9*2=18
9*3=27
9*4=36
9*5=45
9*6=54
9*7=63
9*8=72
9*9=81
9*10=90
ಸರಿಯಾಗಿ ಗಮನಿಸಿ ನೋಡಿ. ಒಂಬತ್ತರ ಮಗ್ಗಿಯನ್ನ ಗುಣಿಸಿದಾಗ ಬರುವ ಎರಡಂಕಿಯ ಉತ್ತರವನ್ನು ಕೂಡಿದರೆ ಬರುವ ಉತ್ತರವೂ 9 ಆಗಿರುತ್ತದೆ. ಉದಾಹರಣೆಗೆ 1+8=9, 2+7=9, 3+6=9, 4+5=9 ಹೀಗೆ. ಕೊನೆಯವರೆಗೂ ಬರುವ ಯಾವುದೇ ಎರಡಂಕಿಯನ್ನು ಕೂಡಿದಾಗ 9 ಉತ್ತರ ಬರುತ್ತದೆ.
ಮತ್ತೊಂದು ಸೋಜಿಗವೂ ಇದರಲ್ಲಿ ಉಂಟು. ಒಂಬತ್ತರ ಮಗ್ಗಿಯ ಉತ್ತರದ ಜಾಗದಲ್ಲಿ ಒಂದು ಸಾಲಿನಲ್ಲಿ 1 ರಿಂದ 9 ಅಂಕಿಯನ್ನು ಬರೆದು, ಅದರ ಪಕ್ಕದಲ್ಲಿ ಕೊನೆಯಿಂದ 0 ಇಂದ 9 ರ ವರೆಗೆ ಏರಿಕೆ ಕ್ರಮದಲ್ಲಿ ಬರೆದರೆ ಒಂಬತ್ತರ ಮಗ್ಗಿ ಪೂರ್ಣಗೊಳ್ಳುತ್ತದೆ.