ಹುಡುಗಿಯನ್ನು ಪ್ರಪೋಸ್ ಮಾಡಲು ಒಬ್ಬೊಬ್ಬರು ಒಂದೊಂದು ವಿಧಾನ ಅಳವಡಿಸಿಕೊಳ್ಳುತ್ತಾರೆ. ಅಂಥದ್ದೇ ಒಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಡಿರುವ ಪ್ರಪೋಸ್ ಇದಾಗಿದೆ.
ಒಬ್ಬ ಯುವಕ, ತಾನು ಇಷ್ಟಪಟ್ಟ ಹುಡುಗಿಗೆ ಪ್ರಪೋಸ್ ಮಾಡಲು ಇಡೀ ಹೊಸ ವರ್ಷದ ಪಾರ್ಟಿಯನ್ನು ಸ್ಟಾಪ್ ಮಾಡಿದ್ದಾನೆ. ಎಲ್ಲಿ ಏನಾಯಿತು ಎಂದು ಜನರು ಗೊಂದಲಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಅಲ್ಲಿಯೇ ಸಂಭ್ರಮಾಚರಣೆದಲ್ಲಿದ್ದ ಹುಡುಗಿಗೆ ಈತ ಪ್ರಪೋಸ್ ಮಾಡಲು ಈ ವಿಧಾನ ಆಯ್ದುಕೊಂಡಿದ್ದಾನೆ.
ಹುಡುಗಿ ಬಿಳಿ ಮಿನುಗು ಗೌನ್ ಧರಿಸಿದ್ದಳು. ಪಾರ್ಟಿ ಸ್ಟಾಪ್ ಆದ ತಕ್ಷಣ ಹಲವರು ಗಲಿಬಿಲಿಗೆ ಒಳಗಾದರು. ಈ ಯುವತಿ ಕೂಡ ಏನಾಯಿತು ಎಂದು ಕೇಳಿದಳು. ನಂತರ ಯುವಕ, ಆ ಯುವತಿಯ ಬಳಿಗೆ ಬಂದು ಮಂಡಿಯೂರಿ, ಇದು ನಿನಗಾಗಿ ಎನ್ನುತ್ತಾನೆ.
“ನೀವು ನನ್ನ ಜೀವನದ ಪ್ರೀತಿ, ಮತ್ತು ನೀವು ನನ್ನನ್ನು ವಿಶ್ವದ ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿ ಮಾಡುತ್ತೀಯಾ. ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಕೇಳುತ್ತಾನೆ. ಹುಡುಗಿಗೆ ಅಚ್ಚರಿಯಾಗಿ, ಕೊನೆಗೆ ಖುಷಿಯಾಗುತ್ತದೆ. ಆಗ ಯುವಕ ಆಕೆಯ ಕೈಗೆ ನಿಶ್ಚಿತಾರ್ಥದ ಉಂಗುರ ತೊಡಿಸುತ್ತಾನೆ.
ಈ ವೈರಲ್ ವಿಡಿಯೋ ನೋಡಿ ಕೆಲವರು ತುಂಬಾ ಸಂತಸ ಪಟ್ಟರೆ, ಇನ್ನು ಹಲವರು ಎಲ್ಲವೂ ಪ್ರೀಪ್ಲ್ಯಾನ್ಡ್ ಎನ್ನುವುದು ತಿಳಿಯುತ್ತದೆ. ಇದರಲ್ಲಿ ಅಚ್ಚರಿಗೊಳ್ಳುವುದು ಏನೂ ಇಲ್ಲ. ಮೊದಲೇ ಎಲ್ಲವೂ ಅರೇಂಜ್ ಆಗಿರುವುದು ಎಂದಿದ್ದಾರೆ.