ಪ್ರಾಣಿಗಳನ್ನು ಮಕ್ಕಳಂತೆ ಸಾಕುವವರು ಮಕ್ಕಳಂತೆಯೇ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುತ್ತಾರೆ. ಅಂಥದ್ದೇ ಒಂದು ಕಾಳಜಿಯ ಕುರಿತು ಇಲ್ಲಿ ಹೇಳುತ್ತಿದ್ದೇವೆ.
ಲೇಕರ್ ಎಂಬ ಮಹಿಳೆ ತಮ್ಮ ಅಬಿಗೈಲ್ ಎಂಬ ಬೆಕ್ಕಿನಲ್ಲಿ ಆಗುತ್ತಿರುವ ಬದಲಾವಣೆ ಗಮನಿಸಿದ್ದು, ಅದೀಗ ವೈರಲ್ ಆಗಿದೆ. ಬೆಕ್ಕು ವಿಚಿತ್ರ ರೀತಿಯಲ್ಲಿ ಉಸಿರಾಡುವುದನ್ನು ಗಮನಿಸಿ ಮಹಿಳೆ, ಅದನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋದರು. ವೈದ್ಯರು ಕೂಡ ಬೆಕ್ಕಿನ ಉಸಿರಾಟದಲ್ಲಿ ವಿಚಿತ್ರ ನಡವಳಿಕೆಯನ್ನು ಗಮನಿಸಿದರು.
ಅಬಿಗೈಲ್, ನಾಯಿಗಳ ಸುತ್ತಲೂ ತನ್ನ ಸಮಯವನ್ನು ಕಳೆದಿದ್ದರಿಂದ, ಅದರಂತೆಯೇ ಉಸಿರಾಡುತ್ತಿತ್ತು. ಆದರೂ ಇದನ್ನು ವೈದ್ಯರು ನಂಬಲಿಲ್ಲ. ಪಶುವೈದ್ಯರು ಅದರ ಮೇಲೆ ನಿಗಾ ಇಡಲು ಹೇಳಿದರು. ಕೆಲವೊಮ್ಮೆ ಬೆಕ್ಕುಗಳು ನಿಮಿಷಕ್ಕೆ 80 ಬಾರಿ ಉಸಿರಾಡುವುದನ್ನು ಗಮನಿಸಲಾಯಿತು. ಬೆಕ್ಕುಗಳು ಸಾಮಾನ್ಯವಾಗಿ ನಿಮಿಷಕ್ಕೆ 15 ರಿಂದ 30 ಉಸಿರಾಟಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಇದು ನಾಯಿಯಂತೆ ಮಾಡುತ್ತಿರುವುದು ಕಂಡುಬಂತು.
“ಮೊದಲಿಗೆ ಸಮಸ್ಯೆ ಇದೆ ಎಂದು ನನಗೆ ತಿಳಿದಿರಲಿಲ್ಲ. ಸಂತಾನಹರಣ ಮಾಡಲು ನಾನು ಅವಳನ್ನು ಪಶುವೈದ್ಯರ ಬಳಿಗೆ ಕರೆದೊಯ್ದಿದಾಗ ಅದರ ಉಸಿರಾಟ ಗಮನಕ್ಕೆ ಬಂತು. ನಂತರ ಅದಕ್ಕೆ ಚಿಕಿತ್ಸೆ ನೀಡಲಾಯಿತು. ಇಲ್ಲದಿದ್ದರೆ ಅದರ ಪ್ರಾಣಕ್ಕೆ ಸಂಚಕಾರ ಇತ್ತು ಎಂದಿದ್ದಾಳೆ.
ಸುದ್ದಿ ಇಷ್ಟೇ ಆಗಿದ್ದರೆ ಅದು ವೈರಲ್ ಆಗುತ್ತಿರಲಿಲ್ಲ. ಆದರೆ ಮಹಿಳೆ ಈ ಬೆಕ್ಕಿನ ಚಿಕಿತ್ಸೆಗೆ ಖರ್ಚುಮಾಡಿದ್ದು 12,500 ಆಸ್ಟ್ರೇಲಿಯನ್ ಡಾಲರ್. ಅಂದರೆ ಸುಮಾರು ₹ 7 ಲಕ್ಷ ರೂಪಾಯಿ! ಈಗ ಬೆಕ್ಕು ಸರಿಯಾಗಿದಂತೆ.