ತನ್ನ ಗೆಳೆಯನ ಹೆಂಡತಿಯ ಅಶ್ಲೀಲ ವಿಡಿಯೋ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಕಾನ್ಸ್ಟೆಬಲ್ನನ್ನು ಅಮಾನತುಗೊಳಿಸಿದ್ದಾರೆ.
ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಕೂಡ ದಾಖಲಾಗಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಯನ್ನು ಅಭಿಜಿತ್ ಪರಬ್ ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳೀಯ ಶಸ್ತ್ರಾಸ್ತ್ರ ವಿಭಾಗದಲ್ಲಿ ನಿಯೋಜಿಸಲಾಗಿತ್ತು.
ಸಂತ್ರಸ್ತೆಯ ಪತಿ ಕಳೆದ ವಾರ ಸಲ್ಲಿಸಿದ ದೂರಿನ ಪ್ರಕಾರ, ಅಶ್ಲೀಲ ವೀಡಿಯೊವನ್ನು ಸಂತ್ರಸ್ತೆಯ ಪತಿಯಿದ್ದ ವಾಟ್ಸಾಪ್ ಗ್ರೂಪ್ನಲ್ಲಿ ಫಾರ್ವರ್ಡ್ ಮಾಡಿದ ನಂತರ ಅತನಿಗೆ ಗೊತ್ತಾಯಿತು. ಆದರೆ ಆರೋಪಿಯು ವಾಟ್ಸಾಪ್ ಗ್ರೂಪಿಗೆ ವೀಡಿಯೊವನ್ನು ನೇರವಾಗಿ ಕಳುಹಿಸಿರಲಿಲ್ಲ.
ಭಾರತೀಯ ದಂಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಆರೋಪಿ ಪರಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರಬ್ ವೀಡಿಯೊ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ನಾವು ಅವರಿಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ.