ಮದುವೆ ದಿನ ವರನಿಂದ ವಧುವಿನ ಪೇಂಟಿಂಗ್‌…!

ಮದುವೆಯೆಂದರೆ ಸಂತೋಷ ಮತ್ತು ಆಚರಣೆಗಳ ಸಮ್ಮಿಲನ. ವಧು-ವರರು ಈ ವಿಶೇಷ ದಿನದಂದು ಸಂತೋಷದಿಂದ ಮತ್ತು ಪರಸ್ಪರ ಆನಂದಿಸುವುದನ್ನು ನೋಡುವುದು ಅತ್ಯಂತ ಸುಂದರವಾದ ದೃಶ್ಯವಾಗಿದೆ. ವರನೊಬ್ಬ ತನ್ನ ಪತ್ನಿಯನ್ನು ಮದುವೆಯ ದಿನದಂದು ಅತ್ಯಂತ ಅದ್ಭುತವಾದ ರೀತಿಯಲ್ಲಿ ಅಚ್ಚರಿಗೊಳಿಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ತಮ್ಮ ಮದುವೆಯ ಸಮಯದಲ್ಲಿ ವಧುವಿನ ಲೈವ್ ಪೇಂಟಿಂಗ್ ಮಾಡಿದ್ದಾನೆ ವರ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ವರುಣ್ ಜರ್ಸಾನಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೊದಲು ನೃತ್ಯ ಮಾಡುತ್ತಿರುವ ವರನ ಹಿಂದೆ ಕ್ಯಾನ್ವಾಸ್ ಮತ್ತು ಬಣ್ಣದ ಬಾಕ್ಸ್ ಇರುವುದನ್ನು ನೋಡಬಹುದು. ನಂತರ ವರ, ವಧುವಿನ ಪೇಂಟಿಂಗ್ ಮಾಡಲು ಪ್ರಾರಂಭಿಸಿದನು. ಪ್ರತಾ ಎಂಬ ವಧು, ವರುಣ್ ಬಣ್ಣ ಬಳಿಯುತ್ತಿದ್ದಂತೆ ಉತ್ಸುಕಳಾಗಿ ಕಾಣಿಸಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ನಿಧಾನವಾಗಿ, ಪೇಂಟಿಂಗ್‌ ಮುಗಿದಿದೆ. ಮೊದಲು ತಲೆಗೆಳಗಾಗಿ ಪೇಂಟಿಂಗ್‌ ತೋರಿಸಿ ನಂತರ ಸರಿಯಾಗಿ ತೋರಿಸಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಅಚ್ಚರಿಯಲ್ಲಿ ಮುಳುಗಿದ್ದಾರೆ.

“ವರನು ತನ್ನ ವಧುಗಾಗಿ ನೃತ್ಯ ಮಾಡುವುದು ತುಂಬಾ ಸಾಮಾನ್ಯವಾಗಿದೆ! ಆದರೆ ಇಲ್ಲಿ ವಧುವು ಜೀವನಪರ್ಯಂತ ನೆನಪು ಇಡುವಂಥ ಗಿಫ್ಟ್‌ ವರ ನೀಡಿದ್ದಾನೆ ಎಂದು ನೆಟ್ಟಿಗರು ಹೇಳಿದ್ದು, ನೂತನ ವಧು-ವರರಿಗೆ ಆಶೀರ್ವದಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read