HomeCrimeಇಯರ್ ಫೋನ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಇಯರ್ ಫೋನ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸ ವರ್ಷಾಚರಣೆ ವೇಳೆ ಕುಡಿದ ಅಮಲಿನಲ್ಲಿ ಇಯರ್ ಫೋನ್ ವಿಚಾರವಾಗಿ ಗೆಳೆಯರು ಸಹೋದ್ಯೋಗಿ ಪೇಂಟರ್ ನ ಹೊಡೆದು ಕೊಂದಿರೋ ಘಟನೆ ಆಗ್ನೇಯ ಬೆಂಗಳೂರಿನ ದೊಡ್ಡನಾಗಮಂಗಲದಲ್ಲಿ ವರದಿಯಾಗಿದೆ.

ಕೃಷ್ಣಗಿರಿಯ ಕಾರ್ತಿಕ್, ಉತ್ತರಹಳ್ಳಿಯ ರವಿ ಮತ್ತು ಉತ್ತರ ಪ್ರದೇಶದ ರಜನೀಶ್ ಅವರು ಬಾಲಾಜಿ ಲೇಔಟ್‌ನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಬಣ್ಣ ಬಳಿಯುತ್ತಿದ್ದರು. ಅವರು ಹೊಸ ವರ್ಷದ ಮುನ್ನಾದಿನದಂದು ಭರ್ಜರಿ ಪಾರ್ಟಿ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರವಿ, ಕಾರ್ತಿಕ್ ನ ಇಯರ್ ಫೋನ್ ಎರವಲು ಪಡೆದು ರಜನೀಶ್ ಗೆ ಕೊಟ್ಟಿದ್ದ. ನಂತರ ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ರವಿ ಮತ್ತು ರಜನೀಶ್ ಫೋಟೋ ಫ್ರೇಮ್ ತೆಗೆದುಕೊಂಡು ಕಾರ್ತಿಕ್ ಗೆ ಹೊಡೆದ ಬಳಿಕ ನಂತರ ಅವರೆಲ್ಲರೂ ನಿದ್ರೆಗೆ ಜಾರಿದರು.

ಭಾನುವಾರ ಬೆಳಗ್ಗೆ ರಜನೀಶ್, ಕಾರ್ತಿಕ್ ನನ್ನು ಥಳಿಸಿದ್ದಾನೆಂದು ರವಿ ಗುತ್ತಿಗೆದಾರ ಮೋಹನ್ ಬಳಿ ದೂರಿದ್ದ. ಗುತ್ತಿಗೆದಾರ ಮೋಹನ್ ಗಾಯಾಳು ಕಾರ್ತಿಕ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ನಂತರ ಆತ ಮೃತಪಟ್ಟಿದ್ದ.

ಬಳಿಕ ಮೋಹನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ರವಿ ಮತ್ತು ರಜನೀಶ್ ಅವರನ್ನು ಸೋಮವಾರ ಸಂಜೆ ವಿಚಾರಣೆಗಾಗಿ ವಶಕ್ಕೆ ಪಡೆದರು.

ಫೋಟೋ ಫ್ರೇಮ್‌ನ ಗಾಜಿನ ತುಂಡುಗಳಿಂದ ಕಾರ್ತಿಕ್ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular