ಚಳಿಗಾಲದಲ್ಲಿ ಅತಿಯಾಗಿ ಕಾಡುವ ತಲೆಹೊಟ್ಟಿನ ಸಮಸ್ಯೆಗೆ 10 ಸುಲಭದ ಪರಿಹಾರಗಳು

ಚಳಿಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಹೆಚ್ಚು. ಆಹಾರ ಸೇವನೆಯಲ್ಲಾಗುವ ವ್ಯತ್ಯಾಸ ಮತ್ತು ಶಿಲೀಂಧ್ರಗಳ ಸೋಂಕಿನಿಂದ ಹೆಚ್ಚಿನ ಜನರಿಗೆ ತಲೆಯಲ್ಲಿ ವಿಪರೀತ ಹೊಟ್ಟಾಗುತ್ತದೆ. ನಿಮ್ಮ ಕೂದಲಿನಲ್ಲೂ ಡ್ಯಾಂಡ್ರಫ್‌ ಇದ್ದರೆ, ನೆತ್ತಿಯಲ್ಲಿ ತುರಿಕೆಯಾಗುತ್ತಿದ್ದರೆ ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ತಲೆಹೊಟ್ಟು ಹೋಗಲಾಡಿಸಲು ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿ.

– ನಾಲ್ಕು ಚಮಚ ಗಸಗಸೆಯನ್ನು ತೆಗೆದುಕೊಂಡು ಅದನ್ನು ಹಾಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಪೇಸ್ಟ್‌ ಅನ್ನು ಕೂದಲಿನ ಬೇರುಗಳಿಗೆ ಅನ್ವಯಿಸಿ. ಸುಮಾರು ಅರ್ಧ ಗಂಟೆ ಹಾಗೇ ಬಿಟ್ಟು, ನಂತರ ಕೂದಲನ್ನು ತೊಳೆಯಿರಿ. ಶಾಂಪೂವಿನಂತೆ ಕೂದಲನ್ನು ತೊಳೆಯಲು ನೀವು ಇದನ್ನು ಬಳಸಬಹುದು.

-ತಲೆಹೊಟ್ಟು ಹೋಗಲಾಡಿಸಲು ಕಡಲೆ ಹಿಟ್ಟು ಕೂಡ ಸಹಕಾರಿಯಾಗಿದೆ. ನಾಲ್ಕು ಚಮಚ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್‌ ಮಾಡಿ. ನಂತರ ತಲೆಸ್ನಾನ ಮಾಡಿಕೊಳ್ಳಿ.

-ರಾತ್ರಿ ಮಲಗುವಾಗ ತೊಗರಿಬೇಳೆಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಬೆಳಗ್ಗೆ ಅದನ್ನು ರುಬ್ಬಿಕೊಂಡು ತಲೆಗೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ ಮತ್ತು ಒದ್ದೆಯಾದ ಕೂದಲನ್ನು ಬಾಚಿಕೊಳ್ಳಿ.

-ಮೊಸರು ಕೂಡ ತಲೆಹೊಟ್ಟನ್ನು ದೂರಮಾಡುತ್ತದೆ. ವಾರಕ್ಕೆ ಎರಡು ಬಾರಿ ತಲೆಗೆ ಮೊಸರು ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಹೊಟ್ಟು ದೂರವಾಗುತ್ತದೆ.

-5 ಚಮಚದಷ್ಟು ನೆಲನೆಲ್ಲಿ ಪುಡಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಆ ನೀರಿನಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.

– ಬೀಟ್ರೂಟ್ ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ ಆ ನೀರಿನಿಂದ ಕೂದಲು ತೊಳೆದರೆ, ತಲೆಹೊಟ್ಟು ಮಾಯವಾಗುತ್ತದೆ.

– ತಲೆಸ್ನಾನ ಮಾಡಲು ಶೀಕಾಕಾಯಿ ಬಳಸುವುದು ಕೂಡ ಉತ್ತಮ. ಶೀಕಾಕಾಯಿ ತಲೆಹೊಟ್ಟನ್ನು ನಿವಾರಿಸುತ್ತದೆ.

– ನಾಲ್ಕಾರು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಬೆರೆಸಿ. ಈ ಎಣ್ಣೆಯನ್ನು ಕೂದಲಿಗೆ ಚೆನ್ನಾಗಿ ಉಜ್ಜಿಕೊಳ್ಳಿ. ಒಂದು ಗಂಟೆಯ ನಂತರ ಸ್ನಾನ ಮಾಡಿ.

-ತಲೆಹೊಟ್ಟು ತೊಡೆದುಹಾಕಲು ನಿಂಬೆ ರಸ ಕೂಡ ಪರಿಣಾಮಕಾರಿಯಾಗಿದೆ. ನಿಂಬೆ ರಸವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ತಲೆಸ್ನಾನ ಮಾಡಬಹುದು.

– ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಅದರಲ್ಲಿ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ತಲೆಹೊಟ್ಟು ಸಂಪೂರ್ಣ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read