ಇಡೀ ವಿಶ್ವಕ್ಕೇ ಕೊರೊನಾ ಸೋಂಕು ಹಂಚಿದ ಚೀನಾ ಇದುವರೆಗೂ ತನ್ನ ದೇಶದಲ್ಲಿನ ಸೋಂಕು ಮತ್ತು ಸಾವಿನ ಸರಿಯಾದ ಅಂಕಿ ಅಂಶವನ್ನ ಮಾತ್ರ ತಿಳಿಸಿಲ್ಲ ಎಂಬ ಆರೋಪವಿದೆ. ಈ ಮಧ್ಯೆ ಚೀನಾದ ಶಾಂಘೈನಲ್ಲಿ ಕೋವಿಡ್ ಪ್ರಕರಣಗಳ ಆತಂಕಕಾರಿ ಉಲ್ಬಣದ ಮಧ್ಯೆ 70% ಕ್ಕಿಂತ ಹೆಚ್ಚು ಜನಸಂಖ್ಯೆಯು ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾಗಿದೆ ಎಂದು ತಜ್ಞರು ಹೇಳಿದ್ದಾರೆ.
“ಈಗ ಶಾಂಘೈನಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆ ತುಂಬಾ ವಿಸ್ತಾರವಾಗಿದೆ ಮತ್ತು ಇದು ಜನಸಂಖ್ಯೆಯ ಶೇಕಡಾ 70 ರಷ್ಟು ತಲುಪಿರಬಹುದು. ಇದು ಏಪ್ರಿಲ್ ಮತ್ತು ಮೇನಲ್ಲಿ ಇದ್ದದ್ದಕ್ಕಿಂತ 20 ರಿಂದ 30 ಪಟ್ಟು ಹೆಚ್ಚು” ಎಂದು ರುಯಿಜಿನ್ ಆಸ್ಪತ್ರೆಯ ಉಪಾಧ್ಯಕ್ಷ ಚೆನ್ ಎರ್ಜೆನ್ ಮತ್ತು ಶಾಂಘೈನ ಕೋವಿಡ್ ತಜ್ಞರ ಸಲಹಾ ಸಮಿತಿಯ ಸದಸ್ಯರೊಬ್ಬರು ರಾಜ್ಯ ಮಾಧ್ಯಮ ಪೀಪಲ್ಸ್ ಡೈಲಿ ಒಡೆತನದ ದಾಜಿಯಾಂಗ್‌ಡಾಂಗ್ ಸ್ಟುಡಿಯೊಗೆ ತಿಳಿಸಿದರು.