alex Certify 7 ಅಡಿ 4 ಇಂಚಿನ ಈ ವ್ಯಕ್ತಿ ಇನ್ನೂ ಬೆಳೆಯುತ್ತಲೇ ಇದ್ದಾನೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ಅಡಿ 4 ಇಂಚಿನ ಈ ವ್ಯಕ್ತಿ ಇನ್ನೂ ಬೆಳೆಯುತ್ತಲೇ ಇದ್ದಾನೆ…..!

ಉತ್ತರ ಘಾನಾದ 29 ವರ್ಷದ ಸುಲೇಮಾನಾ ಅಬ್ದುಲ್ ಸಮೇದ್ 7 ಅಡಿ 4 ಇಂಚು ಎತ್ತರ ಹೊಂದುವ ಮೂಲಕ ಎರಡನೆಯ ಅತಿ ಎತ್ತರದ ವ್ಯಕ್ತಿ ಎಂದು ಘೋಷಿಸ್ಪಟ್ಟಿದ್ದಾನೆ. ಈತ ಟರ್ಕಿಯಲ್ಲಿ ವಾಸಿಸುವ ಮತ್ತು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಜೀವಂತವಾಗಿರುವ ಅತ್ಯಂತ ಎತ್ತರದ ವ್ಯಕ್ತಿ ಎಂಬ ಬಿರುದನ್ನು ಹೊಂದಿರುವ ಸುಲ್ತಾನ್ ಕೊಸೆನ್‌ಗಿಂತ ಕೇವಲ 1 ಅಡಿ ಕುಳ್ಳಗಿದ್ದಾನೆ.

ಅಸಲಿಗೆ, ಸುಲೇಮಾನ್​ ಎತ್ತರ 9 ಅಡಿ 6 ಇಂಚು (2.89 ಮೀ) ಎನ್ನಲಾಗಿತ್ತು. ಆದರೆ ಗ್ರಾಮೀಣ ಚಿಕಿತ್ಸಾಲಯದಲ್ಲಿ ಸರಿಯಾದ ಅಳತೆ ಸಾಧನಗಳಿಲ್ಲ ಎಂದು ನಂತರ ಕಂಡುಹಿಡಿಯಲಾಯಿತು. ಈಗ ಸರಿಯಾಗಿ ಲೆಕ್ಕ ಮಾಡಿದಾಗ ಒಂದು ಅಡಿಯಿಂದ ಗಿನ್ನೆಸ್​ ದಾಖಲೆ ವಂಚಿತನಾಗಿದ್ದಾನೆ ಈತ.

ಈತನ ಎತ್ತರವನ್ನು ಅಳೆಯಲು 16 ಅಡಿ ಅಳತೆಯ ಟೇಪ್ ಅನ್ನು ಬಳಸಲಾಗಿತ್ತು. ಅಂದಹಾಗೆ ಸುಲೇಮಾನ್​ ಇನ್ನೂ ಬೆಳೆಯುತ್ತಲೇ ಇದ್ದಾನೆ. ಆದ್ದರಿಂದ ಮುಂದೊಂದು ದಿನ ತಾನು ಗಿನ್ನೆಸ್​ ದಾಖಲೆ ಸೇರಬಹುದು ಎನ್ನುವ ಆಸೆಯನ್ನು ಈತ ಹೊತ್ತಿದ್ದಾನೆ.

“ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಾನು ಬೆಳೆಯುತ್ತಿದ್ದೇನೆ. ಇನ್ನು ನಾಲ್ಕು ತಿಂಗಳು ಬಿಟ್ಟು ನೋಡಿದರೆ ಇನ್ನೂ ಬೆಳೆಯುತ್ತೇನೆ, ಶೀಘ್ರದಲ್ಲಿ ದಾಖಲೆ ಸೃಷ್ಟಿಸುತ್ತೇನೆ” ಎಂದಿದ್ದಾನೆ ಸುಲೇಮಾನ್​.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Užitočné tipy, ktoré by vám mohli uľahčiť život, jedlo a záhradu. Prečítajte si naše články a naučte sa nové triky, ako uvariť lahodné jedlá a starostlivo pestovať zeleninu vo vašej záhrade. Šťastie sa blíži: Piatim Krémová uhorková Párené Ako pripraviť domáce ravioli: tipy, triky Oranžový Chalop: Dobrodružstvá na vidieku Pečená cuketa s