ʼಬೇಷರಮ್ ರಂಗ್ʼ ಹಾಡಿಗೆ ಸ್ಟೆಪ್ ಹಾಕಿದ ಪಾಕ್ ಯುವಕ: ಡಾನ್ಸ್ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು 04-01-2023 8:38AM IST / No Comments / Posted In: Latest News, Live News, International ಪಠಾಣ್ ಸಿನೆಮಾದ ”ಬೇಷರಮ್ ರಂಗ್” ಹಾಡು ಅನೇಕ ಕಾರಣಗಳಿಂದ ಸುದ್ದಿಯಲ್ಲಿತ್ತು. ಅದರಲ್ಲಿ ನಟಿ ದೀಪಿಕಾ ಹಾಕಿದ್ದ ಕೇಸರಿ ಬಣ್ಣದ ಬಿಕನಿಯಿಂದಾಗಿ ಈ ಹಾಡು ವಿವಾದಕ್ಕೂ ಗುರಿಯಾಗಿತ್ತು. ಆದರೂ ಈ ಹಾಡು ಸೂಪರ್ ಹಿಟ್ ಆಗಿತ್ತು. ನಟ ಶಾರುಖ್ ಖಾನ್ ಮ್ಯಾಚೋ ಮ್ಯಾನ್ ಸ್ಟೈಲ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗ್ಹೋಗಿದ್ದರು. ಇದೇ ಪಠಾಣ್ ಸಿನೆಮಾದ ಹಾಡು ಈಗ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಪಾಕಿಸ್ತಾನ್. ಪಾಕ್‌ನ ಮುಲ್ತಾನ್ ನಗರದಲ್ಲಿರುವ ಯುವಕ. ಈಗ ಇದೇ “ಬೇಷರಮ್ ರಂಗ್“ ಹಾಡಿಗೆ ಡಾನ್ಸ್ ಮಾಡಿದ್ದಾನೆ. ಅದೇ ಡಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ ಪಾಕ್ ಪತ್ರಕರ್ತೆ ನೈಲಾ ಇನಾಯತ್ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನ ಈಗ 27 ಸಾವಿರ ಜನರು ವೀಕ್ಷಿಸಿದ್ದಾರೆ. ಪತ್ರಕರ್ತೆ ನೈಲಾ ಇನಾಯತ್, ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ ಟೈಟಲ್‌ನಲ್ಲಿ “ಬೇಷರಮ್ ರಂಗ್‘, ಮುಲ್ತಾನ್ ಚಾಪ್ಟರ್“ ಎಂದು ಬರೆದುಕೊಂಡಿದ್ದಾರೆ. ನಟಿ ದೀಪಿಕಾ ಹಾಕಿದ್ದ ಸ್ಟೆಪ್ ರೀತಿಯಲ್ಲೇ ಈ ಯುವಕ ಕೂಡ ಸ್ಟೆಪ್ ಹಾಕಿದ್ದಾನೆ. ಆತನ ಡಾನ್ಸ್ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅಷ್ಟೆಅಲ್ಲ ಆತನ ಈ ಡಾನ್ಸ್ ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ. ಮೆಮ್ಸ್ ಕೂಡಾ ಮಾಡಿ ಆ ಯುವಕನನ್ನ ಸರಿಯಾಗಿ ಕಾಲೆಳೆಯುತ್ತಿದ್ದಾರೆ. ಒಟ್ಟನಲ್ಲಿ ಎಲ್ಲರೂ ಆ ಡಾನ್ಸ್ ನೋಡಿ ಎಂಜಾಯ್ ಮಾಡ್ತಿರೋದಂತೂ ಸುಳ್ಳಲ್ಲ. Besharam rang, Multan chapter. pic.twitter.com/4aQjfNc15g — Naila Inayat (@nailainayat) January 2, 2023 😂👍 — Dr Arvind Mayaram اروند مایارام अरविंद मायाराम (@MayaramArvind) January 3, 2023 https://twitter.com/mewadi_kalbhoj/status/1610226092404805634?ref_src=twsrc%5Etfw%7Ctwcamp%5Etweetembed%7Ctwterm%5E1610226092404805634%7Ctwgr%5E91bed3cb08bd84d0d5ab3bdaff43005ecb88115f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpakistani-man-dances-to-srk-and-deepika-padukones-besharam-rang-gets-trolled-2316861-2023-01-03 Acha he acha he bahut acha he 🤣🤣 — Narayan Sahoo (@inarayan4u) January 2, 2023 pic.twitter.com/rvCULfRUxH — smallgenius21 (@smallgenius21) January 2, 2023 https://twitter.com/PeterPandey69/status/1610098692140445696?ref_src=twsrc%5Etfw%7Ctwcamp%5Etweetembed%7Ctwterm%5E1610098692140445696%7Ctwgr%5E91bed3cb08bd84d0d5ab3bdaff43005ecb88115f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpakistani-man-dances-to-srk-and-deepika-padukones-besharam-rang-gets-trolled-2316861-2023-01-03