alex Certify ಪಾಕಿಸ್ತಾನದ ಈ ಭೂಪನಿಗೆ 60 ಮಕ್ಕಳು, ಮತ್ತಷ್ಟು ಮಕ್ಕಳನ್ನು ಪಡೆಯಲು 4ನೇ ಮದುವೆಗೆ ತಯಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ಈ ಭೂಪನಿಗೆ 60 ಮಕ್ಕಳು, ಮತ್ತಷ್ಟು ಮಕ್ಕಳನ್ನು ಪಡೆಯಲು 4ನೇ ಮದುವೆಗೆ ತಯಾರಿ….!

ವಿಶ್ವದ ಎಲ್ಲಾ ದೇಶಗಳು ಜನಸಂಖ್ಯೆ ನಿಯಂತ್ರಣಕ್ಕೆ ಹರಸಾಹಸ ಮಾಡ್ತಿವೆ. ಆದ್ರೆ ಪಾಕಿಸ್ತಾನದಲ್ಲಿ ಮಾತ್ರ ಜನಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. 2050 ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಬೆಳವಣಿಗೆಗೆ 50 ಪ್ರತಿಶತದಷ್ಟು ಕೊಡುಗೆ ನೀಡುವ ವಿಶ್ವದ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದಾಗಲಿದೆ.

ವೃತ್ತಿಯಲ್ಲಿ ವೈದ್ಯ ಎಂದು ಕರೆದುಕೊಳ್ಳುವ ಪಾಕಿಸ್ತಾನಿಯೊಬ್ಬ 60 ಮಕ್ಕಳಿಗೆ ಈಗಾಗ್ಲೇ ತಂದೆಯಾಗಿದ್ದಾನಂತೆ. ತನಗೆ ಇನ್ನಷ್ಟು ಮಕ್ಕಳು ಬೇಕೆಂದು ಆತ ಇನ್ನೂ ಹಪಹಪಿಸುತ್ತಿದ್ದಾನೆ.

ಪಾಕಿಸ್ತಾನದ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ವಾಸಿಸುತ್ತಿರುವ ಸರ್ದಾರ್ ಹಾಜಿ ಜಾನ್ ಮೊಹಮ್ಮದ್ ಈ ವಿಚಿತ್ರ ಖಯಾಲಿಯುಳ್ಳ ವ್ಯಕ್ತಿ. ತಾನು ಈಗಾಗ್ಲೇ 60 ಮಕ್ಕಳ ತಂದೆಯೆಂದು ಆತನೇ ಹೇಳಿಕೊಂಡಿದ್ದಾನೆ. ಈತನ ಐವರು ಮಕ್ಕಳು ಮೃತಪಟ್ಟಿದ್ದಾರೆ, ಉಳಿದ 55 ಮಕ್ಕಳು ಆರೋಗ್ಯವಾಗಿದ್ದಾರಂತೆ. ಅಚ್ಚರಿಯ ವಿಷಯವೆಂದರೆ ಹಾಜಿ ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸುತ್ತಾನೆ. ಅಷ್ಟೇ ಅಲ್ಲ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳಲು ನಾಲ್ಕನೇ ಮದುವೆಯ ಪ್ಲಾನ್‌ನಲ್ಲಿದ್ದಾನೆ.

ಹಾಜಿಗೆ ಈಗ 50 ವರ್ಷ. ತಾನು ವೈದ್ಯನೆಂದು ಹೇಳಿಕೊಳ್ತಿರೋ ಈತ ಕ್ಲಿನಿಕ್‌ ಒಂದನ್ನು ನಡೆಸ್ತಿದ್ದಾನೆ. ಹಾಜಿ ಜಾನ್ ತನ್ನ 60ನೇ ಮಗುವಿಗೆ ಖುಶಾಲ್ ಖಾನ್ ಎಂದು ಹೆಸರಿಟ್ಟಿದ್ದಾನೆ. ಹಾಜಿ ಜಾನ್ಗೆ ತನ್ನ ಎಲ್ಲಾ 60 ಮಕ್ಕಳ ಹೆಸರು ನೆನಪಿನಲ್ಲಿದೆಯಂತೆ. ಇಷ್ಟೆಲ್ಲಾ ಮಕ್ಕಳನ್ನು ಹೆರಲು ಆತನ ಪತ್ನಿಯರು ಕೂಡ ಸಹಕಾರ ಕೊಟ್ಟಿದ್ದಾರೆ. ಇನ್ನಷ್ಟು ಮಕ್ಕಳನ್ನು ಹೊಂದುವ ಆಸೆಗೆ ಅವರದ್ದೂ ಬೆಂಬಲವಿದೆಯಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...