ಮೈಕೋವಾಕಾನ್: ವಿಮಾನ ನಿಲ್ದಾಣದಲ್ಲಿ ಪಾರ್ಸೆಲ್ ಕಂಪೆನಿಯೊಂದು ತಂದ ಪಾರ್ಸೆಲ್ ಅನ್ನು ಎಕ್ಸ್-ರೇ ಉಪಕರಣಗಳ ಮೂಲಕ ತಪಾಸಣೆ ನಡೆಸಿದಾಗ ವಿಚಿತ್ರವೊಂದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.
ನಾಲ್ಕು ತಲೆಬುರುಡೆಗಳು ಸ್ಪಷ್ಟವಾಗಿ ಪಾರ್ಸೆಲ್‌ನಲ್ಲಿ ಗೋಚರವಾಗಿದೆ. ಇದು ಮನುಷ್ಯನದ್ದೇ ಎಂದು ಗುರುತಿಸಲಾಗಿದ್ದು, ಅವುಗಳನ್ನು ಪಾರದರ್ಶಕ ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡಲಾಗಿತ್ತು. ಈ ಪಾರ್ಸೆಲ್‌ಗೆ ಯಾವುದೇ ನೋಂದಣಿ ಇರಲಿಲ್ಲ.
ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ಭಾಗಗಳಲ್ಲಿ ಒಂದಾದ ಮೈಕೋವಾಕನ್ ರಾಜ್ಯದ ದಕ್ಷಿಣ ನಗರವಾದ ಅಪಾಜ್ಟಿಂಗನ್‌ನಿಂದ ದಕ್ಷಿಣ ಕೆರೊಲಿನಾದ ಮ್ಯಾನಿಂಗ್‌ನಲ್ಲಿರುವ ವಿಳಾಸಕ್ಕೆ ಈ ಪೆಟ್ಟಿಗೆ ಕಳುಹಿಸಲಾಗಿತ್ತು.
ಗಾರ್ಡ್ ಅಧಿಕಾರಿಗಳು ಪೆಟ್ಟಿಗೆಯನ್ನು ತೆರೆದಾಗ, ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ ನಾಲ್ಕು ಮಾನವ ತಲೆಬುರುಡೆಗಳು ಕಂಡುಬಂದವು ಎಂದು ವರದಿಯಾಗಿದೆ. ತಲೆಬುರುಡೆಗಳನ್ನು ಹೇಗೆ ಪಡೆಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.