alex Certify 1,100 ಕಿ.ಮೀ. ದೂರದಿಂದ ಸೈಕಲ್‌ ಮೇಲೆ ಬಂದಿದ್ದ ಅಭಿಮಾನಿ; ಫೋಟೋಗೆ ಫೋಸ್‌ ನೀಡಿದ ಸಲ್ಮಾನ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1,100 ಕಿ.ಮೀ. ದೂರದಿಂದ ಸೈಕಲ್‌ ಮೇಲೆ ಬಂದಿದ್ದ ಅಭಿಮಾನಿ; ಫೋಟೋಗೆ ಫೋಸ್‌ ನೀಡಿದ ಸಲ್ಮಾನ್ ಖಾನ್

ತನ್ನನ್ನು ನೋಡಲು ಸೈಕಲ್ ನಲ್ಲಿ ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರ ಸಾಗಿ ಬಂದಿದ್ದ ಅಭಿಮಾನಿಯ ಜೊತೆ ನಟ ಸಲ್ಮಾನ್ ಖಾನ್ ಫೋಟೋಗೆ ಪೋಸ್ ನೀಡಿರುವುದು ವೈರಲ್ ಆಗ್ತಿದೆ.

ಮಧ್ಯಪ್ರದೇಶದ ಜಬಲ್‌ಪುರದ ಸಲ್ಮಾನ್ ಖಾನ್ ಅಭಿಮಾನಿಯೊಬ್ಬರು ಇತ್ತೀಚೆಗೆ ಸೈಕಲ್‌ನಲ್ಲಿ ಸೂಪರ್‌ಸ್ಟಾರ್ ನನ್ನು ಭೇಟಿ ಮಾಡಲು ಮುಂಬೈಗೆ ಪ್ರಯಾಣಿಸಿದ್ದರು. ತನ್ನನ್ನು ಸಲ್ಮಾನ್ ಖಾನ್ ಅವರ “ದೀವಾನಾ” ಎಂದು ಬಣ್ಣಿಸಿಕೊಳ್ಳುವ ಯುವಕ ತನ್ನ ನೆಚ್ಚಿನ ನಟ ಸಲ್ಮಾನ್ ಖಾನ್ ರನ್ನು ಭೇಟಿ ಮಾಡಲು ಸೈಕಲ್‌ನಲ್ಲಿ ಸುಮಾರು 1,100 ಕಿ.ಮೀಟರ್ ದೂರದಿಂದ ಬಂದಿದ್ದರು.

ಅದೃಷ್ಟವಶಾತ್ ಈ ವೇಳೆ ಸಲ್ಮಾನ್ ಖಾನ್ ನಿವಾಸದಲ್ಲಿ ಹಾಜರಿದ್ದರು ಮತ್ತು ಅಭಿಮಾನಿಯೊಂದಿಗೆ ಮಾತನಾಡಿ ಅವರ ಸೈಕಲ್ ಜೊತೆ ನಿಂತು ಪೋಸ್ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋ ವೈರಲ್ ಆಗ್ತಿದೆ. ಸಲ್ಮಾನ್ ಖಾನ್ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...