HomeLatest Newsಖ್ಯಾತ ಟೆನಿಸ್ ತಾರೆಗೆ ಗಂಟಲು, ಸ್ತನ ಕ್ಯಾನ್ಸರ್ ಪತ್ತೆ: ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ಮಾರ್ಟಿನಾ ನವ್ರಾಟಿಲೋವಾ

ಖ್ಯಾತ ಟೆನಿಸ್ ತಾರೆಗೆ ಗಂಟಲು, ಸ್ತನ ಕ್ಯಾನ್ಸರ್ ಪತ್ತೆ: ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ಮಾರ್ಟಿನಾ ನವ್ರಾಟಿಲೋವಾ

ಇತಿಹಾಸದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ಟೆನಿಸ್ ದಂತಕಥೆ ಮಾರ್ಟಿನಾ ನವ್ರಾಟಿಲೋವಾ ಅವರಿಗೆ ಗಂಟಲು ಮತ್ತು ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

18 ಬಾರಿಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಜನವರಿಯಲ್ಲಿ ನ್ಯೂಯಾರ್ಕ್‌ ನಲ್ಲಿ ಚಿಕಿತ್ಸೆ ಪ್ರಾರಂಭಿಸಲು ಸಿದ್ಧವಾಗಿದ್ದಾರೆ. ತಾನು ಪಡೆದಿರುವ ಎಲ್ಲದರೊಂದಿಗೆ ರೋಗದ ವಿರುದ್ಧ ಹೋರಾಡಲು ಸಿದ್ಧ ಎಂದು ಮಾರ್ಟಿನಾ ನವ್ರಾಟಿಲೋವಾ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಟಿನಾ ನವ್ರಾಟಿಲೋವಾ ಅವರು 2010 ರಲ್ಲಿ ಸ್ತನ ಕ್ಯಾನ್ಸರ್ ರೋಗನಿರ್ಣಯ ಮಾಡಿದರು. ಅವರು ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಒಳಗಾದರು.

66 ವರ್ಷ ವಯಸ್ಸಿನ ಅವರು ಹೇಳಿಕೆಯಲ್ಲಿ, ಅವರ ಕ್ಯಾನ್ಸರ್ ಆರಂಭಿಕ ಹಂತದಲ್ಲಿದೆ. ಚಿಕಿತ್ಸೆ ನಂತರ ಚೇತರಿಸಿಕೊಳ್ಳುವ ಆಶಯದಲ್ಲಿದ್ದೇನೆ ಎಂದು ಹೇಳಿದರು.

9 ಬಾರಿ ವಿಂಬಲ್ಡನ್ ಗೆದ್ದಿರುವ ನವ್ರಾಟಿಲೋವಾ ಅವರು ಆಸ್ಟ್ರೇಲಿಯನ್ ಓಪನ್ 2023 ರ ಸಮಯದಲ್ಲಿ ಟೆನಿಸ್ ಚಾನೆಲ್‌ ಗಾಗಿ ಕಾಮೆಂಟರಿ ಸ್ಟಂಟ್‌ ಗೆ ಸಿದ್ಧರಾಗಿದ್ದರು.

ಮಾರ್ಟಿನಾ ನವ್ರಾಟಿಲೋವಾ ಅವರಿಗೆ ಮೊದಲ ಹಂತದ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ತಿಂಗಳಿನಿಂದ ಅವರ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.

ಕಳೆದ ಋತುವಿನ ಡಬ್ಲ್ಯುಟಿಎ ಫೈನಲ್‌ನಲ್ಲಿ ತನ್ನ ಕುತ್ತಿಗೆಯಲ್ಲಿ ದುಗ್ಧರಸ ಗ್ರಂಥಿಯು ವಿಸ್ತರಿಸಿರುವುದನ್ನು ಗಮನಿಸಿ ಪರೀಕ್ಷೆ ಮಾಡಿಸಿದಾಗ ಗಂಟಲಿನ ಕ್ಯಾನ್ಸರ್ ಎನ್ನುವುದು ಗೊತ್ತಾಗಿದೆ. ಅದೇ ಸಮಯದಲ್ಲಿ ಮಾರ್ಟಿನಾ ಗಂಟಲಿನ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾಗ, ಸ್ತನ ಕ್ಯಾನ್ಸರ್ ಕೂಡ ಇರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

ನವ್ರಾಟಿಲೋವಾ ಅವರು 3 ಆಸ್ಟ್ರೇಲಿಯನ್ ಓಪನ್ ಕಿರೀಟಗಳು, 2 ಫ್ರೆಂಚ್ ಓಪನ್ ಪ್ರಶಸ್ತಿಗಳು, 9 ವಿಂಬಲ್ಡನ್ ಮತ್ತು 4 ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಟೆನಿಸ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular