
ಮೆಕ್ಸಿಕೊ ಸಿಟಿ – ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿಯಾಚೆಗಿನ ಸಿಯುಡಾಡ್ ಜುವಾರೆಜ್ ನಲ್ಲಿರುವ ರಾಜ್ಯ ಕಾರಾಗೃಹದ ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ದಾಳಿ ಮಾಡಿದ ಬಂದೂಕುಧಾರಿಗಳು ಫೈರಿಂಗ್ ಮಾಡಿದ್ದು, ದಾಳಿಯಲ್ಲಿ 10 ಗಾರ್ಡ್‌ಗಳು ಮತ್ತು 4 ಕೈದಿಗಳು ಸಾವನ್ನಪ್ಪಿದ್ದಾರೆ.
ಚಿಹುವಾಹುವಾ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯಲ್ಲಿ ಬೆಳಿಗ್ಗೆ 7 ಗಂಟೆಗೆ ವಿವಿಧ ಶಸ್ತ್ರಸಜ್ಜಿತ ವಾಹನಗಳು ಜೈಲಿಗೆ ಬಂದವು. ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡು ಹಾರಿಸಿದರು. ಕೊಲ್ಲಲ್ಪಟ್ಟವರ ಜೊತೆಗೆ, 13 ಜನರು ಗಾಯಗೊಂಡರು ಮತ್ತು ಕನಿಷ್ಠ 24 ಕೈದಿಗಳು ತಪ್ಪಿಸಿಕೊಂಡಿದ್ದಾರೆ.
ಮೆಕ್ಸಿಕನ್ ಸೈನಿಕರು ಮತ್ತು ರಾಜ್ಯ ಪೊಲೀಸರು ಕಾರ್ಯಾಚರಣೆ ನಂತರ ಜೈಲಿನ ನಿಯಂತ್ರಣಮರಳಿ ಪಡೆದಿದ್ದು, ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.
ಆಗಸ್ಟ್ ನಲ್ಲಿ, ಅದೇ ರಾಜ್ಯದ ಜೈಲಿನೊಳಗಿನ ಗಲಭೆಯು 11 ಜನರನ್ನು ಬಲಿತೆಗೆದುಕೊಂಡಿತ್ತು.