ಚಳಿಗಾಲ ಬಂದ ಕೂಡಲೇ ಕೂದಲಲ್ಲಿ ಶುಷ್ಕತೆ, ಸುಕ್ಕುಗಟ್ಟುವಿಕೆ, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದು ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಶೀತ ಗಾಳಿ, ಕ್ವಿಲ್ಟ್ ಅಥವಾ ಕಂಬಳಿಗಳನ್ನು ಧರಿಸಿ ಮಲಗುವುದರಿಂದ ಇದು ಹೆಚ್ಚಾಗಿ ಸಂಭವಿಸುತ್ತದೆ. ಇದು ನಿಮ್ಮ ಕೂದಲಿನ ತೇವಾಂಶವನ್ನು ತೆಗೆದುಹಾಕುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಕೂದಲು ಉದುರುವುದನ್ನು ತಡೆಯಲು ಆರೋಗ್ಯಕಾರಿ ಜ್ಯೂಸ್ ಒಂದು ಸಹಕಾರಿಯಾಗಿದೆ. ನೆಲ್ಲಿಕಾಯಿ, ಬೀಟ್ರೂಟ್ ಮತ್ತು ಕ್ಯಾರೆಟ್‌ಗಳಂತಹ ಅನೇಕ ಆರೋಗ್ಯಕರ ತರಕಾರಿಗಳ ಸಹಾಯದಿಂದ ಈ ಜ್ಯೂಸನ್ನು ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಜೊತೆಗೆ ಕೂದಲು ಆರೋಗ್ಯಕರವಾಗಿರುತ್ತದೆ. ನಿಮ್ಮ ದೇಹಕ್ಕೂ ಇದು ಅನುಕೂಲ ಮಾಡಿಕೊಡುತ್ತದೆ.
ಜ್ಯೂಸ್ ಮಾಡಲು 2 ಕ್ಯಾರೆಟ್, 2 ನೆಲ್ಲಿಕಾಯಿ, 1 ಬೀಟ್ರೂಟ್, 10-15 ಒಣದ್ರಾಕ್ಷಿ, 15-20 ಪುದೀನಾ ಎಲೆಗಳು, ಸ್ವಲ್ಪ ಶುಂಠಿ, ಒಂದೂವರೆ ಚಮಚದಷ್ಟು ನಿಂಬೆರಸ, ರುಚಿಗೆ ತಕ್ಕಷ್ಟು ಉಪ್ಪು ತೆಗೆದುಕೊಳ್ಳಿ. ನೆಲ್ಲಿಕಾಯಿ, ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆಯಿರಿ. ನಂತರ ಈ ಎಲ್ಲಾ ತರಕಾರಿಗಳ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಮಿಕ್ಸಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಣದ್ರಾಕ್ಷಿ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ರುಬ್ಬಿ.
ಜ್ಯೂಸ್ ಅನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿಕೊಂಡು ಅದಕ್ಕೆ ಉಪ್ಪು ಮತ್ತು ನಿಂಬೆರಸ ಸೇರಿಸಿ ಸರ್ವ್ ಮಾಡಿ. ಬೆಳಗಿನ ಉಪಾಹಾರ ಮತ್ತು ಊಟದ ನಡುವಿನ ವಿರಾಮದ ಸಮಯದಲ್ಲಿ ಈ ಜ್ಯೂಸ್ ಅನ್ನು ಕುಡಿಯಬಹುದು. ಅಥವಾ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ಸ್ನಾಕ್‌ಗೂ ಇದನ್ನು ಸೇವನೆ ಮಾಡಬಹುದು. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.