alex Certify ʼಚಳಿಗಾಲʼದಲ್ಲಿ ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಳಿಗಾಲʼದಲ್ಲಿ ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತವೆ. ನೀವು ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳನ್ನು ತೊಡೆದುಹಾಕಲು ಬಯಸಿದರೆ, ಮೊಟ್ಟೆಗಳೊಂದಿಗೆ ದಿನವನ್ನು ಪ್ರಾರಂಭಿಸಿ. ಮೊಟ್ಟೆಯಿಂದ ಆಮ್ಲೆಟ್‌ ಅಥವಾ ಬುರ್ಜಿ ಮಾಡಿ ಸೇವಿಸುವ ಬದಲು ಬೇಯಿಸಿ ತಿನ್ನುವುದು ಹೆಚ್ಚು ಉಪಯುಕ್ತ. ಮೊಟ್ಟೆಯಲ್ಲಿ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳಿವೆ.

ಬೆಳಗಿನ ಉಪಾಹಾರಕ್ಕೆ ಬೇಯಿಸಿದ ಮೊಟ್ಟೆಗಳು ಉತ್ತಮ ಆಯ್ಕೆಯಾಗಿದೆ. ಬೇಯಿಸಿದ ಮೊಟ್ಟೆಗಳನ್ನು ತಿಂದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ನೋಡೋಣ.  ಬೇಯಿಸಿದ ಮೊಟ್ಟೆಗಳು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿವೆ. ಇದು ನಮ್ಮ ಅಂಗಗಳನ್ನು ಬಲಪಡಿಸುತ್ತದೆ ಮತ್ತು ರಕ್ಷಿಸುತ್ತದೆ. ದೇಹವನ್ನು ಬೆಚ್ಚಗಿಡಲು ಮೊಟ್ಟೆ ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ಬರುವ ಕಾಯಿಲೆಗಳ  ಅಪಾಯವನ್ನು ಕಡಿಮೆ ಮಾಡುತ್ತದೆ.

ವಿಟಮಿನ್ ಡಿ ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಕೋಲೀನ್, ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಜೀವಕೋಶಗಳಿಗೆ ರಕ್ಷಕವಾಗಿದೆ. ಮೆದುಳಿನಲ್ಲಿ ಸಿಗ್ನಲಿಂಗ್ ಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೊಟ್ಟೆಯು ನೇರ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಉತ್ತಮ ಮೂಲವಾಗಿದೆ. ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆಲಸ್ಯ ಮತ್ತು ಶೀತ ಹವಾಮಾನವು ನಿಮ್ಮ ಫಿಟ್‌ನೆಸ್‌ನ ಶತ್ರುಗಳಿದ್ದಂತೆ. ಆದರೆ ಮೊಟ್ಟೆ ನಿಮ್ಮ ಸೋಮಾರಿತನವನ್ನು ಹೋಗಲಾಡಿಸುತ್ತದೆ. ವಿಟಮಿನ್ ಬಿ6, ಬಿ12 ಮತ್ತು ಸತು ಮೊಟ್ಟೆಯಲ್ಲಿ ಹೇರಳವಾಗಿ ಇರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಜ್ವರ ಮತ್ತು ಶೀತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...