alex Certify ಆರೋಗ್ಯವನ್ನೇ ಹಾಳು ಮಾಡುತ್ತೆ ನಿಮ್ಮ ನಿದ್ರಾಭಂಗಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯವನ್ನೇ ಹಾಳು ಮಾಡುತ್ತೆ ನಿಮ್ಮ ನಿದ್ರಾಭಂಗಿ……!

ಕಚೇರಿಯ ಒತ್ತಡ, ದಿನವಿಡೀ ಕೆಲಸದ ಆಯಾಸದ ನಂತರ ಚೆನ್ನಾಗಿ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ. ಸುಸ್ತಾಗಿ ಮಲಗಿದ ನಂತರ ಆವರಿಸುವ ಸುಖ ನಿದ್ದೆ ಸ್ವರ್ಗಕ್ಕೆ ಸಮ. ಆದರೆ ಅನೇಕರಿಗೆ ಹಾಸಿಗೆಯ ಮೇಲೆ ಮಲಗಿದರೂ ನಿದ್ರೆ ಬರುವುದಿಲ್ಲ. ಮಗ್ಗಲು ಬದಲಿಸುತ್ತಲೇ ಇರುತ್ತಾರೆ. ಇದರಲ್ಲೇ   ಸಾಕಷ್ಟು ಸಮಯ ವ್ಯರ್ಥವಾಗುತ್ತದೆ.

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಚೆನ್ನಾಗಿ ನಿದ್ದೆಯನ್ನೂ ಮಾಡಬೇಕು. ನಿದ್ರೆ ಸರಿಯಾಗಿ ಬರಬೇಕೆಂದರೆ ನಾವು ಮಲಗುವ ಸ್ಥಿತಿ ಸರಿಯಾಗಿರಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ನೇರವಾಗಿ ಮಲಗಲು ಇಷ್ಟಪಡುತ್ತಾರೆ, ಕೆಲವರು ಹೊಟ್ಟೆಯನ್ನು ಅಡಿಗೆ ಮಾಡಿ ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸರಿಯಾದ ಪೊಸಿಶನ್‌ನಲ್ಲಿ ಮಲಗದೇ ಇದ್ದರೆ ನಿದ್ರೆಗೆ ತೊಂದರೆಯಾಗುವುದರ ಜೊತೆಗೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಹೊಟ್ಟೆ ಅಡಿಮಾಡಿ ಮಲಗುವುದು: ಅನೇಕರು ಈ ಸ್ಥಿತಿಯಲ್ಲಿ ನಿದ್ರಿಸುತ್ತಾರೆ. ಆದರೆ ಹೊಟ್ಟೆಯನ್ನು ಅಡಿಮಾಡಿ  ಮಲಗುವುದರಿಂದ ಆರೋಗ್ಯಕ್ಕೆ ಅಪಾಯವಿದೆ. ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಬೆನ್ನುಮೂಳೆಯ ಸಮಸ್ಯೆಯೂ ಆಗಬಹುದು. ಇದಲ್ಲದೆ ಬೆನ್ನು ನೋವು ಮತ್ತು ನರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

ಬೆನ್ನಿನ ಮೇಲೆ ಮಲಗುವುದು: ಇದು ಅತ್ಯಂತ ಸಾಮಾನ್ಯವಾದ ಮಲಗುವ ಭಂಗಿ. ನೀವು ಹಾಸಿಗೆಯ ಮೇಲೆ ನೇರವಾಗಿ ಮಲಗಿದರೆ ಅದು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಭುಜ, ಬೆನ್ನು ನೋವನ್ನು ನಿವಾರಿಸುವುದಲ್ಲದೆ, ಆಸಿಡ್ ರಿಫ್ಲಕ್ಸ್‌ನಂತಹ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ಗರ್ಭಿಣಿಯರಿಗೆ ಇದು ಸೂಕ್ತವಾದ ಮಲಗುವ ಭಂಗಿಯಾಗಿದೆ.

ಮುದುರಿ ಮಲಗುವುದು: ಬೆಚ್ಚಗೆ ಮುದುರಿ ಮಲಗುವುದು ಎಷ್ಟೋ ಮಂದಿಗೆ ಆರಾಮದಾಯಕವೆನಿಸುತ್ತದೆ. ಹೊಟ್ಟೆಯಲ್ಲಿರುವ ಭ್ರೂಣದಂತೆ ಅದೇ ಭಂಗಿಯಲ್ಲಿ ನಾವು ಮಲಗುತ್ತೇವೆ. ಇದು ಸೊಂಟ ಮತ್ತು ಕಾಲುಗಳಿಗೆ ಆರಾಮ ನೀಡಬಲ್ಲದು. ಈ ರೀತಿ ಮಲಗುವುದರಿಂದ ಗೊರಕೆಯ ಸಮಸ್ಯೆಯೂ ದೂರವಾಗುತ್ತದೆ. ನಿದ್ದೆ ಕೂಡ ಚೆನ್ನಾಗಿ ಬರುತ್ತದೆ.

ಬದಿಯಲ್ಲಿ ಮಲಗುವುದು: ಬದಿಯಲ್ಲಿ ಮಲಗುವುದು ಕೂಡ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದ್ರೆ ಮಧ್ಯೆ ಅದನ್ನು ಬದಲಾಯಿಸುತ್ತಿರಿ. ಬದಿಯಲ್ಲಿ ಮಲಗುವುದರಿಂದ ಬೆನ್ನುಮೂಳೆಯ ಸಮಸ್ಯೆಗಳು ಬರುವುದಿಲ್ಲ. ಕುತ್ತಿಗೆ, ಭುಜಗಳು ಮತ್ತು ಬೆನ್ನು ಕೂಡ ರಿಲ್ಯಾಕ್ಸ್‌ ಆಗುತ್ತದೆ. ಎಡಭಾಗದಲ್ಲಿ ಮಲಗುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನಿದ್ರೆಯ ಸಮಯದಲ್ಲಿ ರಕ್ತದ ಹರಿವು ಸರಿಯಾಗಿ ಆಗುತ್ತದೆ, ಚೆನ್ನಾಗಿ ನಿದ್ರೆಯೂ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...