ಇಂದು ಬಹುತೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದೀಗ ಆಹಾರ ಪದ್ದತಿಯಲ್ಲಿಯೇ ಮಧುಮೇಹವನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಮಾಡಿದ್ದು, ನಾವು ಬಳಸುವ ‘ಕ್ಯಾಪ್ಸಿಕಂ’ ಮೆಣಸು ಮಧುಮೇಹವನ್ನು ನಿಯಂತ್ರಣ ಮಾಡುತ್ತದೆ ಎಂಬ ಅಂಶವನ್ನು ಹೊರ ಬಂದಿತ್ತು.
ಹಸಿರು, ಹಳದಿ ಮತ್ತು ಕೆಂಪು ಮೆಣಸುಗಳಲ್ಲಿರುವ ಗ್ಲೂಕೋಸಡೇಸ್ ಮತ್ತು ಲಿಪಿಡ್ ತೆಗೆಯುವ ಕಿಣ್ವ ಪ್ಯಾಂಕ್ರಿಯಾಟಿಕ್ ಲಿಪೇಸ್ಪೋ ಆಲ್ಫಾ ಪೋಷಣೆ ಜೀರ್ಣಕಾರಿ ಕಿಣ್ವಗಳು ಕಾರ್ಬೊಹೈಡ್ರೇಟ್ ವಿಭಾಗಿಸುವುದರಲ್ಲಿ ಯಶಸ್ವಿಯಾಗಿದ್ದು, ಇದು ಮಧುಮೇಹವನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ವಿಜ್ಞಾನಿಗಳು ಹಳದಿ ಮತ್ತು ಕೆಂಪು ಕ್ಯಾಪ್ಸಿಕಂ ಮೆಣಸುಗಳ ಕುರಿತು ಈ ಅಧ್ಯಯನ ನಡೆಸಿದ್ದು, ಇದರಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಲಿಕ್ವಿಡ್ ಗಳ ಜೀರ್ಣಕ್ರಿಯೆ ನಿಧಾನವಾಗಿ ಕಂಡುಬಂದಿದ್ದು, ಅದರಲ್ಲಿಯೂ ಹಸಿರು ಕ್ಯಾಪ್ಸಿಕಂ ಗೆ ಹೋಲಿಸಿದರೆ ಹಳದಿ ಕ್ಯಾಪ್ಸಿಕಂ ಗಮನಾರ್ಹವಾಗಿ ಆಲ್ಫಾ ಗ್ಲೂಕೋಸಡೇಸ್ ಮತ್ತು ಲಿಪೇಸ್ ಕಿಣ್ವದ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ ಎಂಬುದು ಗಮನಕ್ಕೆ ಬಂದಿದೆ.