HomeAstroವಾಸ್ತು ದೋಷ ಕಳೆದು ಅದೃಷ್ಟ ಬದಲಾಯಿಸುತ್ತೆ ಚಿಕ್ಕ ಸ್ಪಟಿಕ

ವಾಸ್ತು ದೋಷ ಕಳೆದು ಅದೃಷ್ಟ ಬದಲಾಯಿಸುತ್ತೆ ಚಿಕ್ಕ ಸ್ಪಟಿಕ

ಕಷ್ಟಪಟ್ಟು ದುಡಿದ್ರೂ ಕೆಲವೊಮ್ಮೆ ತಕ್ಕ ಫಲ ಸಿಗುವುದಿಲ್ಲ. ಅದೃಷ್ಟ ಚೆನ್ನಾಗಿಲ್ಲ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೇವರನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸ್ತಾರೆ. ತಪ್ಪು ದಾರಿ ತುಳಿದು ಅನೇಕರು ಹಣ ಸಂಪಾದಿಸಲು ಮುಂದಾಗ್ತಾರೆ. ಇನ್ಮುಂದೆ ಶ್ರಮಕ್ಕೆ ತಕ್ಕ ಫಲ ಸಿಕ್ಕಿಲ್ಲ ಎಂದು ಗೋಳಾಡಬೇಡಿ. ಮನೆಯಲ್ಲಿ ಯಾವುದೇ ವಾಸ್ತು ದೋಷವಿದ್ದರೆ ಸುಲಭವಾಗಿ ಪರಿಹರಿಸಿಕೊಳ್ಳಿ.

ವಾಸ್ತು ದೋಷಕ್ಕೆ ಸ್ಪಟಿಕ ಒಳ್ಳೆಯ ಮದ್ದು. 50 ಗ್ರಾಂ ಸ್ಪಟಿಕವನ್ನು ಖರೀದಿ ಮಾಡಿ ಮನೆಯ ಪ್ರತಿಯೊಂದು ಕೋಣೆಯಲ್ಲೂ ಒಂದೊಂದನ್ನು ಇಡಿ. ಕಚೇರಿ ಅಥವಾ ನೀವು ಕೆಲಸ ಮಾಡುವ ಯಾವುದೇ ಸ್ಥಳದಲ್ಲಿಯಾದ್ರೂ ಇದನ್ನು ಇಡಬಹುದು. ಇದ್ರಿಂದ ಸುಖ-ಶಾಂತಿ ಲಭಿಸುವ ಜೊತೆಗೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಟ್ಟ ಸ್ವಪ್ನ, ಭಯ ಹುಟ್ಟಿಸುವ ಕನಸು ಬೀಳ್ತಾ ಇದ್ದರೆ ಒಂದು ಕಪ್ಪು ಬಟ್ಟೆಯಲ್ಲಿ ಸ್ಪಟಿಕವನ್ನು ಕಟ್ಟಿ ಹಾಸಿಗೆ ಕೆಳಗೆ ಅಥವಾ ದಿಂಬಿನ ಕೆಳಗಿಟ್ಟು ಮಲಗಿರಿ.

ವ್ಯಾಪಾರದಲ್ಲಿ ವೃದ್ಧಿ, ವ್ಯವಹಾರದಲ್ಲಿ ಧನ ಲಾಭ ಕಾಣ ಬಯಸುವವರು ಕಪ್ಪು ಬಟ್ಟೆಯಲ್ಲಿ ಸ್ಪಟಿಕವನ್ನು ಕಟ್ಟಿ ಬಾಗಿಲ ಮೇಲೆ ತೂಗು ಹಾಕಿ. ಧನ ಲಾಭವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular