alex Certify ತೂಕ ಇಳಿಸಲು ಬ್ರೆಡ್‌ ಅಥವಾ ರೊಟ್ಟಿ ಯಾವುದು ಬೆಸ್ಟ್‌….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಬ್ರೆಡ್‌ ಅಥವಾ ರೊಟ್ಟಿ ಯಾವುದು ಬೆಸ್ಟ್‌….?

ಸಾಮಾನ್ಯವಾಗಿ ಎಷ್ಟೋ ಮನೆಗಳಲ್ಲಿ ಬೆಳಗ್ಗೆ ತಿಂಡಿಗೆ ಬ್ರೆಡ್‌ ತಿನ್ನುವ ಅಭ್ಯಾಸವಿರುತ್ತದೆ. ಬ್ರೆಡ್‌ ತಿಂದರೆ ತೂಕ ಕಡಿಮೆಯಾಗುತ್ತದೆ ಅನ್ನೋದು ಅದೆಷ್ಟೋ ಜನರ ನಂಬಿಕೆ. ಹಾಗಾಗಿ ಮನೆಯಲ್ಲೇ ಮಾಡಿದ ರುಚಿಯಾದ ಚಪಾತಿ ಅಥವಾ ರೊಟ್ಟಿ ಬಿಟ್ಟು ಬೆಳಗ್ಗೆ ಬ್ರೆಡ್‌ ತಿನ್ನೋದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ.

ಕೆಲವೊಮ್ಮೆ ವಿಭಿನ್ನ ಕಾರಣಗಳಿಗಾಗಿ ಆರೋಗ್ಯ ತಜ್ಞರು ಬ್ರೆಡ್ ಸೇವಿಸಲು ಸಲಹೆ ನೀಡುತ್ತಾರೆ. ಆದರೆ ಬ್ರೆಡ್‌ನಲ್ಲಿ ಸಕ್ಕರೆ, ಪ್ರಿಸರ್ವೇಟಿವ್ಸ್‌, ಮತ್ತಿತರ ಅನೇಕ ಅನಾರೋಗ್ಯಕರ ಸಂಯುಕ್ತಗಳು ನಮಗೆ ಅಪಾಯಕಾರಿಯಾಗಬಹುದು.

ಹಾಗಾಗಿ ಬ್ರೆಡ್‌ಗಿಂತ ಚಪಾತಿ ಅಥವಾ ರೊಟ್ಟಿಯೇ ಬೆಸ್ಟ್‌ ಎನ್ನುತ್ತಾರೆ ತಜ್ಞರು. ರೊಟ್ಟಿ, ರೋಟಿ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಇದನ್ನು ನಾವು ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ತಯಾರಿಸುತ್ತೇವೆ. ರೊಟ್ಟಿ ಸೇವನೆ ಮೂಲಕ ಹೆಚ್ಚುತ್ತಿರುವ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು…?

ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಕರಗುವ ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳ ಉಪಸ್ಥಿತಿಯಿಂದಾಗಿ ರೊಟ್ಟಿ ಖಂಡಿತವಾಗಿಯೂ ಬ್ರೆಡ್‌ಗಿಂತ ಆರೋಗ್ಯಕರ ಆಯ್ಕೆಯಾಗಿದೆ. ಈ ಫೈಬರ್‌ಗಳು ನಿಮಗೆ ಶಕ್ತಿಯನ್ನು ನೀಡುತ್ತವೆ, ಆರೋಗ್ಯಕರ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತವೆ. ಬಹಳ ಸಮಯದವರೆಗೆ ಹೊಟ್ಟೆ ತುಂಬಿದಂತೆ ಇರುವುದರಿಂದ ಪದೇ ಪದೇ ತಿನ್ನಬೇಕೆಂಬ ಬಾಯಿ ಚಪಲವನ್ನು ತಡೆಯಬಹುದು.

ಬ್ರೆಡ್‌ನಲ್ಲಿ ಪ್ರಿಸರ್ವೇಟಿವ್‌ಗಳಿರುತ್ತವೆ. ಹಾಗಾಗಿಯೇ ಇದನ್ನು ಒಂದು ವಾರದವರೆಗೂ ಇಟ್ಟು ತಿನ್ನಬಹುದು. ಆದರೆ ರೊಟ್ಟಿಗಳನ್ನು ತಕ್ಷಣವೇ ತಯಾರಿಸಿ ಬಿಸಿ ಬಿಸಿಯಾಗಿ ತಿನ್ನಲಾಗುತ್ತದೆ. ತಾಜಾತನ ಮತ್ತು ಪ್ರಿಸರ್ವೇಟಿವ್‌ಗಳಿಲ್ಲದ ಕಾರಣ ರೊಟ್ಟಿ ಅತ್ಯಂತ ಆರೋಗ್ಯಕರ. ಬ್ರೆಡ್‌ನಲ್ಲಿ ಯೀಸ್ಟ್‌ ಇರುತ್ತದೆ. ಮೃದುವಾಗಲು ಬ್ರೆಡ್‌ಗೆ ಯೀಸ್ಟ್‌ ಬಳಸಲಾಗುತ್ತದೆ. ಬ್ರೆಡ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಯನ್ನು ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಬ್ರೆಡ್‌ ಅನ್ನು ಸಾಮಾನ್ಯವಾಗಿ ಸಿಹಿ ಅಥವಾ ಖಾರವಾಗಿ ಮಾಡಲಾಗುತ್ತದೆ. ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಿಗೆ ಅತ್ಯಂತ ಹಾನಿಕಾರಕವಾಗಿದೆ. ಆದ್ದರಿಂದ ಬ್ರೆಡ್‌ ಬದಲು ರೊಟ್ಟಿ ಅಥವಾ ಚಪಾತಿ ಸೇವನೆಯೇ ಸೂಕ್ತ. ತೂಕವನ್ನು ನಿಯಂತ್ರಿಸಲು ಬಯಸಿದರೆ ಬ್ರೆಡ್ ಅನ್ನು ದೂರವಿಡುವುದು ಒಳಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...