HomeAstroಈ ರಾಶಿಯವರಿಗಿದೆ ಇಂದು ಶುಭಫಲ

ಈ ರಾಶಿಯವರಿಗಿದೆ ಇಂದು ಶುಭಫಲ

ಮೇಷ ರಾಶಿ

ಗೃಹಸ್ಥ ಮತ್ತು ದಾಂಪತ್ಯ ಜೀವನ ಆರಂಭಕ್ಕೆ ಇಂದು ಶುಭ ದಿನ. ಕುಟುಂಬಸ್ಥರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ನಿಮಗೆ ಒಳಿತಾಗುತ್ತದೆ. ತಂದೆಯಿಂದ ಲಾಭವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ಧನಲಾಭದ ಯೋಗವಿದೆ. ಹಿರಿಯ ಅಧಿಕಾರಿಗಳು ನಿಮ್ಮಿಂದ ಪ್ರಸನ್ನರಾಗುತ್ತಾರೆ.

ಮಿಥುನ ರಾಶಿ

ಆಧ್ಯಾತ್ಮಿಕತೆ ಮತ್ತು ಈಶ್ವರನ ಆರಾಧನೆಯಿಂದ ಅನಿಷ್ಠ ವಿಚಾರಗಳಿಂದ ಮುಕ್ತಿ ಪಡೆಯಬಹುದು. ಮಾನಹಾನಿಯಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಯಂತ್ರಣ ಇರಲಿ.

ಕರ್ಕ ರಾಶಿ

ತನು-ಮನ ಆರೋಗ್ಯವಾಗಿಯೂ, ಪ್ರಫುಲ್ಲವಾಗಿಯೂ ಇರುತ್ತದೆ. ಮಿತ್ರರೊಂದಿಗೆ ಪ್ರವಾಸ ಆಯೋಜಿಸಲಿದ್ದೀರಿ. ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಸಿಂಹ ರಾಶಿ

ಇಂದು ವಿಶೇಷ ಲಾಭಗಳು ದೊರೆಯಬಹುದು. ವ್ಯಾಪಾರ-ದಂಧೆಯಲ್ಲಿ ವೃದ್ಧಿಯ ಜೊತೆಜೊತೆಗೆ ಆದಾಯವೂ ವೃದ್ಧಿಸುತ್ತದೆ. ಉದ್ಯೋಗಿಗಳಿಗೆ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಸುಖ-ಸಂತೋಷವಿರಲಿದೆ.

ಕನ್ಯಾ ರಾಶಿ

ಮಾತು ಮತ್ತು ಕೋಪ ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯ. ನೆಗಡಿ ಮತ್ತು ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗಬಹುದು. ಖರ್ಚು ಹೆಚ್ಚಾಗಲಿದೆ.

ತುಲಾ ರಾಶಿ

ಇಂದು ಶುಭ ಫಲವಿದೆ. ಭಿನ್ನ-ವಿಭಿನ್ನ ರೀತಿಯ ಲಾಭಗಳು ದೊರೆಯುತ್ತವೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸಮಾರಂಭಕ್ಕೆ ತೆರಳುವ ಸಾಧ್ಯತೆ ಇದೆ. ಧನಪ್ರಾಪ್ತಿಯಾಗಬಹುದು.

ವೃಶ್ಚಿಕ ರಾಶಿ

ಕುಟುಂಬದಲ್ಲಿ ಆನಂದದ ವಾತಾವರಣವಿರುತ್ತದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ನಕಾರಾತ್ಮಕ ಆಲೋಚನೆಗಳಿಂದ ಮನಸ್ಸಿನಲ್ಲಿ ದುಗುಡ ಹೆಚ್ಚಬಹುದು.

ಧನು ರಾಶಿ

ಇಂದು ಸಮಾಧಾನದಿಂದಿರುವುದು ಒಳಿತು. ಹೊಸ ಕಾರ್ಯ ಆರಂಭಿಸಬೇಡಿ. ಕೋಪದ ಮೇಲೆ ನಿಯಂತ್ರಣವಿರಲಿ. ಅನೈತಿಕ ಕಾರ್ಯಗಳಿಂದ ದೂರವಿರಿ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.

ಮಕರ ರಾಶಿ

ಶಾರೀರಿಕವಾಗಿ ಶಿಥಿಲತೆ ಮತ್ತು ಆಲಸ್ಯದ ಅನುಭವವಾಗುತ್ತದೆ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮಧ್ಯಾಹ್ನದ ನಂತರ ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ.

ಕುಂಭ ರಾಶಿ

ಇವತ್ತು ನಿಮಗೆ ಶುಭಫಲವಿದೆ. ಹೊಸ ಕಾರ್ಯದ ಆಯೋಜನೆ ಸಫಲವಾಗಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಪದೋನ್ನತಿ ಸಾಧ್ಯತೆ ಇದೆ. ಹಣ, ಗೌರವ-ಪ್ರತಿಷ್ಠೆ ದೊರೆಯಬಹುದು.

ಮೀನ ರಾಶಿ

ನಿಮ್ಮ ವಿಚಾರಗಳಲ್ಲಿ ಶೀಘ್ರ ಪರಿವರ್ತನೆಯಾಗುತ್ತದೆ. ಮಹಿಳೆಯರು ತಮ್ಮ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಪ್ರಯಾಣವನ್ನು ರದ್ದು ಮಾಡಿ. ಆಕಸ್ಮಿಕವಾಗಿ ಹಣ ಖರ್ಚಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular