alex Certify ತೂಕ ಇಳಿಸಲು ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಸಾಕು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಸಾಕು……!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ ಚಾಲೆಂಜ್‌ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ವಾರ, ತಿಂಗಳ ಲೆಕ್ಕದಲ್ಲಿ ತೂಕ ಇಳಿಸುವ ಚಾಲೆಂಜ್‌ ಅನ್ನು ಎಲ್ಲರೂ ಸ್ವೀಕರಿಸಿ ಅದಕ್ಕೆ ತಕ್ಕಂತೆ ಕಸರತ್ತು ಮಾಡ್ತಿದ್ದಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನಾವು ನಮ್ಮ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಬೇಕು. ಆಗ ಮಾತ್ರ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ : ತೂಕ ಇಳಿಸುವ ಪ್ರಕ್ರಿಯೆ ಬೆಳಗ್ಗೆ ಎದ್ದ ತಕ್ಷಣ ಆರಂಭವಾಗಬೇಕು. ಯಾಕಂದ್ರೆ ಇದರ ಪರಿಣಾಮ ದಿನವಿಡೀ ಇರುತ್ತದೆ. ಬೆಳಗ್ಗೆ ಪೂರಿ, ಪರೋಟ ಸೇರಿದಂತೆ ಇನ್ನಿತರ ಎಣ್ಣೆ ತಿನಿಸುಗಳನ್ನು ತಿನ್ನುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ. ಬದಲಾಗಿ ತಾಜಾ ಹಣ್ಣುಗಳು ಅಥವಾ ಇತರ ಯಾವುದೇ ಆರೋಗ್ಯಕರ ಉಪಹಾರವನ್ನು ಸೇವನೆ ಮಾಡಿ. ಇದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ ತಿಂಗಳೊಳಗೆ ಪರಿಣಾಮವನ್ನು ಕಾಣಬಹುದು.

ಗ್ರೀನ್ ಟೀ ಕುಡಿಯಿರಿ : ಭಾರತದಲ್ಲಿ ಬಹುತೇಕ ಮಂದಿ ಬೆಳಗ್ಗೆಯಿಂದ ಸಂಜೆಯವರೆಗೆ ಹಲವಾರು ಬಾರಿ ಹಾಲು ಮತ್ತು ಸಕ್ಕರೆ ಬೆರೆಸಿದ ಚಹಾ ಅಥವಾ ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಆದರೆ ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದರ ಬದಲು ನೀವು ಗ್ರೀನ್‌ ಟೀ ಕುಡಿಯಿರಿ. ಆಗ ದೇಹದಲ್ಲಿ ಬದಲಾವಣೆ ಆಗಲು ಸಾಧ್ಯ.

ಹಣ್ಣುಗಳ ಶೇಕ್‌ ಮಾಡಿ ಕುಡಿಯಬೇಡಿ: ಹಣ್ಣುಗಳನ್ನು ಸೇವನೆ ಮಾಡಲು ಹಲವಾರು ಮಾರ್ಗಗಳಿವೆ. ನೀವು ಅದನ್ನು ಹಾಗೇ ತಿನ್ನಬಹುದು ಅಥವಾ ಜ್ಯೂಸ್‌ ಮಾಡಿ ಕುಡಿಯಬಹುದು. ಆದರೆ ಹಣ್ಣುಗಳಿಂದ ಮಿಲ್ಕ್‌ ಶೇಕ್‌ ಮಾಡಿ ಕುಡಿಯಬೇಡಿ. ಇದರಿಂದ ನಿಮ್ಮ ದೇಹವು ಬಳಲುತ್ತದೆ. ಏಕೆಂದರೆ ಹಣ್ಣು ಮತ್ತು ಹಾಲಿನ ಪರಿಣಾಮವು ವಿಭಿನ್ನವಾಗಿರುತ್ತದೆ, ಇದು ಹೊಟ್ಟೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ, ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಸಿಹಿ ತಿನಿಸುಗಳ ಸೇವನೆ ಬೇಡ : ಐಸ್‌ಕ್ರೀಂ ಸೇರಿದಂತೆ ಸಿಹಿ ತಿನಿಸುಗಳ್ನು ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ನೀವು ಹೆಚ್ಚು ಸಕ್ಕರೆ ಅಥವಾ ಅದರಿಂದ ತಯಾರಿಸಿದ ವಸ್ತುಗಳನ್ನು ಸೇವಿಸಿದರೆ ಅದರಿಂದ ಬೇಗನೆ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಸಿಹಿತಿಂಡಿಗಳನ್ನು ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...