ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಾಳು ಬಹು ಮುಖ್ಯ. ಅದರಲ್ಲೂ ಪೌಷ್ಟಿಕಾಂಶಗಳ ಆಗರವಾದ ಮೊಳಕೆಕಾಳು ಬೆಳಗಿನ ಉಪಹಾರಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನ ಪ್ರಮಾಣದ ನಾರು, ಪ್ರೊಟೀನ್ ಒಳಗೊಂಡಿರುವ ಇದರಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.
ಇದರಿಂದ ಮಾಡಿದ ತಿಂಡಿಯನ್ನು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತಾಗಿ ಬೇಗ ಹಸಿವಾಗುವುದಿಲ್ಲ. ಹಸಿ ಕ್ಯಾರೆಟ್, ಸೌತೆಕಾಯಿ, ದಾಳಿಂಬೆ ಕಾಳು, ನಿಂಬೆರಸ ಮತ್ತು ಸ್ವಲ್ಪ ಉಪ್ಪು ಹಾಕಿ ತಿಂದರೆ ತುಂಬಾ ರುಚಿಯಾಗಿರುತ್ತದೆ.
ಮೊಳಕೆ ಕಾಳುಗಳಲ್ಲಿ ಸನ್ ಸ್ಟ್ರೋಕ್ ತಡೆಯುವ, ಪಚನಕ್ರಿಯೆ ಸರಳಗೊಳಿಸುವ, ದೇಹ ತೂಕ ಇಳಿಸುವ, ಕೊಲೆಸ್ಟ್ರಾಲ್ ಕಡಿಮೆಗೊಳಿಸುವ, ಚರ್ಮದ ಕಾಂತಿ ಹೆಚ್ಚಿಸುವ, ಮೂಳೆಗಳನ್ನು ಗಟ್ಟಿಗೊಳಿಸುವ ಗುಣಗಳಿವೆ. ಸಣ್ಣ ಮಕ್ಕಳ ಬೆಳವಣಿಗೆಗೂ ಮೊಳಕೆಕಾಳಿನ ತಿಂಡಿಗಳು ಬೆಸ್ಟ್.