ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಸಮುದ್ರದ ಉಪ್ಪು ನಿಮ್ಮ ಚರ್ಮದಲ್ಲಿನ ಕಲ್ಮಶಗಳನ್ನು ಹೊರ ಹಾಕಲು ಸಹಕಾರಿಯಾಗಿದೆ. 2 ಚಮಚ ಸಮುದ್ರದ ಉಪ್ಪು ಮತ್ತು 3 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಒದ್ದೆಯಾದ ಚರ್ಮದ ಮೇಲೆ ಹಚ್ಚಿದರೆ ಚರ್ಮದಲ್ಲಿರುವ ಕಲ್ಮಶಗಳು ಹೊರಹೋಗಿ ಚರ್ಮದ ಕಾಂತಿ ಹೆಚ್ಚಾಗಿತ್ತದೆ.
ನೀವು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಸಮುದ್ರದ ಉಪ್ಪಿಗೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿಕೊಳ್ಳಿ. ಬಳಿಕ ಶಾಂಪುವಿನಿಂದ ನಿಮ್ಮ ಕೂದಲನ್ನು ವಾಶ್ ಮಾಡಿ. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ ತಲೆಹೊಟ್ಟು ನಿವಾರಣೆಯಾಗುತ್ತದೆ.
ಹಲ್ಲುಗಳು ಹಳದಿಗಟ್ಟಿದ್ದರೆ ½ ಚಮಚ ಸಮುದ್ರದ ಉಪ್ಪಿನ ಪುಡಿಗೆ 1 ಚಮಚ ಅಡುಗೆ ಸೋಡಾ ಮಿಕ್ಸ್ ಮಾಡಿ ಟೂತ್ ಬ್ರೆಶ್ ನಿಂದ ಉಜ್ಜಿದರೆ ಹಲ್ಲು ಬೆಳ್ಳಗಾಗುತ್ತದೆ.