ಅನೇಕ ಬಾರಿ ಕಚೇರಿಯಲ್ಲಿ ಕೆಲಸ ಮಾಡಲು ಮನಸ್ಸಾಗೋದಿಲ್ಲ. ವ್ಯಕ್ತಿ ಬೇಗ ಆಯಾಸಗೊಳ್ತಾನೆ. ಇದು ವಾಸ್ತು ದೋಷದ ಕಾರಣವೂ ಇರಬಹುದು. ವಾಸ್ತು ದೋಷವಿದ್ದರೆ ವ್ಯಕ್ತಿ ಮನಸ್ಸಿನಲ್ಲಿ ನಿರಾಸೆಯ ಭಾವನೆ ಮನೆ ಮಾಡಿರುತ್ತದೆ. ಸಣ್ಣಪುಟ್ಟ ಬದಲಾವಣೆಗಳಿಂದ ಕಚೇರಿಯಲ್ಲಿ ನೆಮ್ಮದಿ ಕಂಡುಕೊಳ್ಳಬಹುದು.
ಕಚೇರಿಗೆ ಹೋಗ್ತಾ ಇದ್ದಂತೆ ನಕಾರಾತ್ಮಕ ಶಕ್ತಿ ಇದೆ ಎಂಬಂತೆ ಭಾಸವಾದ್ರೆ 27 ದಿನಗಳ ಕಾಲ ನಿರಂತರವಾಗಿ ನೀರಿಗೆ ಉಪ್ಪು ಬೆರೆಸಿ ಕಚೇರಿಯ ಎಲ್ಲ ಕೊಠಡಿಗೆ ಚಿಮುಕಿಸಿ.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಸುವ ವೇಳೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ.
ಕಂಪನಿ ಉತ್ತುಂಗಕ್ಕೇರಬೇಕೆಂದಾದಲ್ಲಿ ಮಾಲೀಕ ಯೋಗ್ಯ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು.
ಸಂಪತ್ತಿನ ದೇವರು ಕುಬೇರ. ಕಚೇರಿಯ ಉತ್ತರ ಭಾಗ ಅಥವಾ ಈಶಾನ್ಯಕ್ಕೆ ಕುಬೇರನ ಮೂರ್ತಿಯನ್ನಿಡಿ.
ಯಾವುದೇ ಹೊಸ ವ್ಯವಹಾರ ಶುರು ಮಾಡುವ ಮೊದಲು ವಾಸ್ತು ದೋಷವಿದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ.
You Might Also Like
TAGGED:vastu-tips-work-interest