ʼನೆಲ್ಲಿಕಾಯಿʼ ಹೀಗೆ ಬಳಸಿ ಪಡೆಯಿರಿ ಉದ್ದ ಕೂದಲು

ನೆಲ್ಲಿಕಾಯಿಯಿಂದ ದೇಹಕ್ಕೆ ಇರುವ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಇದು ಕೂದಲಿನ ಆರೈಕೆ ಮಾಡುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಕೂದಲಿನ ಬೆಳವಣಿಗೆಗೆ ಬಳಸಲಾಗುತ್ತಿತ್ತು. ನೆಲ್ಲಿಕಾಯಿಯು ಕೂದಲಿಗೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಇದು ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್, ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ.

ನೆಲ್ಲಿಕಾಯಿಯನ್ನು ಚಿಕ್ಕ ಚಿಕ್ಕ ತುಂಡಗಳಾಗಿ ಕತ್ತರಿಸಿ. ಅವುಗಳನ್ನು ನೆರಳಿನಲ್ಲಿ ಒಣಗಿಸಿ. ನಂತರ ನೆಲ್ಲಿಕಾಯಿ ತುಂಡುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ತಲೆ ಹೊಟ್ಟಿನ ಸಮಸ್ಯೆ ಇರುವವರು ನೆಲ್ಲಿಕಾಯಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಡ್ರೈ ಕೂದಲ ಸಮಸ್ಯೆಯೂ ನಿವಾರಣೆಯಾಗುತ್ತದೆ. ಜೊತೆಗೆ ಕೂದಲು ಚೆನ್ನಾಗಿ ಬೆಳೆಯುತ್ತದೆ. ಈ ಮಿಶ್ರಣವನ್ನು ಮನೆಯಲ್ಲಿ ತಯಾರಿಸುವುದು ತುಂಬಾ ಒಳ್ಳೆಯದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read