ಈ ತರಕಾರಿಗಳ ಸೇವನೆಯಿಂದ ಹೆಚ್ಚಾಗುತ್ತೆ ಗ್ಯಾಸ್ಟ್ರಿಕ್‌ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಗ್ಯಾಸ್‌ ಟ್ರಬಲ್.‌ ಇದಕ್ಕೆ ಕಾರಣ ನಾವು ಸೇವಿಸುವ ಆಹಾರ. ಹೂಕೋಸಿನಂತಹ ಕೆಲವೊಂದು ತರಕಾರಿಗಳು ಹಾಗೂ ಹೋಟೆಲ್‌, ರೆಸ್ಟೋರೆಂಟ್‌ ಸೇರಿದಂತೆ ಹೊರಗಿನ ತಿಂಡಿ ತಿನಿಸುಗಳು ಗ್ಯಾಸ್ಟ್ರಿಕ್‌ಗೆ ಕಾರಣವಾಗುತ್ತವೆ. ಕೆಲವೊಂದು ತರಕಾರಿಗಳನ್ನು ಅವಾಯ್ಡ್‌ ಮಾಡಿದ್ರೆ ನೀವು ಗ್ಯಾಸ್‌ನಿಂದ ಪಾರಾಗಬಹುದು. ಅವು ಯಾವುದು ಅನ್ನೋದನ್ನು ನೋಡೋಣ.

ನೀವು ಪ್ರತಿದಿನ ಗೋಬಿ ತಿನ್ನುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ. ಯಾಕಂದ್ರೆ  ಗೋಬಿ ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪಾದಿಸುತ್ತದೆ. ಅನೇಕರು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತಾರೆ. ಕೆಲವರಿಗೆ ಗೋಬಿ ತಿಂದರೆ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿಕೊಳ್ಳುತ್ತದೆ. ಗೋಬಿಯ ಮೇಲೋಗರ ಮಾಡುವಾಗ ಅದನ್ನೊಮ್ಮೆ ಬಿಸಿ ನೀರಿನಲ್ಲಿ ಕುದಿಸಿಕೊಳ್ಳಿ, ಈ ರೀತಿ ಮಾಡುವುದರಿಂದ ಗ್ಯಾಸ್‌ ಆಗದಂತೆ ತಡೆಯಬಹುದು.

ಅಥವಾ ಗೋಬಿಯ ಮೇಲೋಗರಕ್ಕೆ ಇಂಗು ಸೇರಿಸಿ. ಬ್ರೊಕೊಲಿ ಹಾಗೂ ಅಸ್ಪರಾಗಸ್‌ನಂತಹ ತರಕಾರಿಗಳಿಂದಲೂ ಗ್ಯಾಸ್‌ ಹೆಚ್ಚಾಗುತ್ತದೆ. ಬೇಳೆಕಾಳುಗಳು ಪ್ರೋಟೀನ್ ಒದಗಿಸುತ್ತವೆ ಅನ್ನೋದು ಸುಳ್ಳಲ್ಲ. ಆದ್ರೆ ಕೆಲವೊಂದು ಬೇಳೆಕಾಳುಗಳನ್ನು ತಿಂದರೆ ಹೊಟ್ಟೆಯಲ್ಲಿ ಗ್ಯಾಸ್‌ ಶುರುವಾಗುತ್ತದೆ. ಉದ್ದಿನ ಬೇಳೆ ಮತ್ತು ತೊಗರಿ ಬೇಳೆ ಗ್ಯಾಸ್ಟ್ರಿಕ್‌ಗೆ ಕಾರಣವಾಗುತ್ತವೆ.

ಹಾಗಾಗಿ ಇವುಗಳಿಂದ ಯಾವುದೇ ತಿನಿಸುಗಳನ್ನು ಮಾಡುವ ಮುನ್ನ ನೆನೆಸಿಕೊಳ್ಳಿ. ಕೊನೆಯಲ್ಲಿ ಇಂಗಿನ ಒಗ್ಗರಣೆ ಕೊಡಲು ಮರೆಯಬೇಡಿ. ಹಲಸಿನ ಹಣ್ಣು ಅಥವಾ ಹಲಸಿನ ಕಾಯಿ ಕೂಡ ಗ್ಯಾಸ್‌ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಹಲಸನ್ನು ಮಿತವಾಗಿಯೇ ತಿನ್ನುವುದು ಉತ್ತಮ.

ಹೆಚ್ಚು ಸೇವಿಸಿದರೆ ಹೊಟ್ಟೆ ಉಬ್ಬರಿಸಬಹುದು. ಸಾಮಾನ್ಯವಾಗಿ ಹೆಚ್ಚಿನ ಜನರು ಕಿಡ್ನಿ ಬೀನ್ಸ್ ಅಥವಾ ರಾಜ್ಮಾ ಮತ್ತು ಬಿಳಿ ಕಡಲೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇವೆರಡೂ ಹೊಟ್ಟೆಯಲ್ಲಿ ಬಹಳಷ್ಟು ಗ್ಯಾಸ್‌ ಉತ್ಪಾದಿಸುತ್ತವೆ. ಹಾಗಾಗಿ ಇವುಗಳನ್ನು ಜೀರ್ಣಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಗ್ಯಾಸ್‌ಗೆ ಕಾರಣವಾಗುವ ತರಕಾರಿಗಳಿಂದ ದೂರವಿದ್ದರೆ ಸ್ವಲ್ಪ ಮಟ್ಟಿಗೆ ಹೊಟ್ಟೆಯ ಸಮಸ್ಯೆ ಪರಿಹಾರವಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read