alex Certify ಸರಿಯಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಿಯಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು ಮಲಗುತ್ತೆ ಎಂಬುದನ್ನು ನೋಡಿ. ವಯಸ್ಸಿಗೆ ತಕ್ಕಂತೆ ಮಗು ಅಗತ್ಯವಿರುವಷ್ಟು ನಿದ್ರೆ ಮಾಡಿದ್ರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆಯಂತೆ.ಅಧ್ಯಯನವೊಂದರ ಪ್ರಕಾರ, ಮಕ್ಕಳು 10-12 ಗಂಟೆ ನಿದ್ರೆ ಮಾಡಿದ್ರೆ ಅವರ ಭಾಷಾ ಜ್ಞಾನ ಚೆನ್ನಾಗಿರುತ್ತದೆಯಂತೆ. ಇದ್ರಿಂದ ಮಕ್ಕಳಿಗೆ ಹೆಚ್ಚೆಚ್ಚು ಶಬ್ದಗಳು ನೆನಪಿನಲ್ಲಿರುತ್ತವೆ. ಅರಿಜೋನಾ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಅಧ್ಯಯನಕ್ಕೆ 3 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳಲಾಗಿತ್ತು. ಶಾಲೆಯಿಂದ ಬಂದ ತಕ್ಷಣ ಅಂದ್ರೆ ಮಧ್ಯಾಹ್ನ 2 ಗಂಟೆ ನಂತ್ರ ಮಲಗುವ ಮಕ್ಕಳಲ್ಲಿ ಭಾಷಾ ಜ್ಞಾನ ಹೆಚ್ಚಿತ್ತೆಂದು ಅಧ್ಯಯನ ಹೇಳಿದೆ. ಆದ್ರೆ ಮಕ್ಕಳು ಯಾವ ಸಮಯದಲ್ಲಿ ಮಲಗ್ತಾರೆನ್ನುವುದು ಅವಶ್ಯವಲ್ಲ. ದಿನದ 24 ಗಂಟೆಯಲ್ಲಿ ಎಷ್ಟು ತಾಸು ನಿದ್ರೆ ಮಾಡ್ತಾರೆನ್ನುವುದು ಮಹತ್ವದ್ದೆಂದು ಸಂಶೋಧಕರು ಹೇಳಿದ್ದಾರೆ.ವಯಸ್ಸಿನ ಪ್ರಕಾರ ಯಾರಿಗೆ ಎಷ್ಟು ನಿದ್ರೆ ಬೇಕು?

0-3 ತಿಂಗಳ ಮಗು : 14-17 ಗಂಟೆ  ನಿದ್ರೆ

4-11 ತಿಂಗಳ ಮಗು : 12-15 ಗಂಟೆ ನಿದ್ರೆ,  1-2 ವರ್ಷದ ಮಗು : 11-14 ಗಂಟೆ ನಿದ್ರೆ

3-5 ವರ್ಷದ ಮಗು : 10-13 ಗಂಟೆ ನಿದ್ರೆ

6-13 ವರ್ಷದ ಮಕ್ಕಳು : 9-11 ಗಂಟೆ ನಿದ್ರೆ

14-17 ವರ್ಷ : 8-10 ಗಂಟೆ ನಿದ್ರೆ

18-25 ವರ್ಷ: 7-9 ಗಂಟೆ ನಿದ್ರೆ

26-64 ವರ್ಷ : 7-9 ಗಂಟೆ ನಿದ್ರೆ,  65ರ ನಂತ್ರ : 7-8 ಗಂಟೆ ನಿದ್ರೆ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...