ಎಲ್ಲರ ಮನೆಯಲ್ಲಿಯೂ ಗೋಡೆ ಗಡಿಯಾರ ಹಾಕೆ ಹಾಕ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ನಾವು ಗಡಿಯಾರವನ್ನು ಹಾಕ್ತೇವೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ಇದಕ್ಕೂ ಮಹತ್ವವಿದೆ. ಗಡಿಯಾರವನ್ನು ಎಲ್ಲಿ ಹಾಕಿದ್ರೆ ಒಳ್ಳೆಯದು, ಎಲ್ಲಿ ಹಾಕಿದ್ರೆ ಅಶುಭ ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ಅತಿ ಹಳೆಯದಾದ, ಆಗಾಗ ಕೆಟ್ಟುಹೋಗುವ ಹಾಗೂ ಬಣ್ಣದ ಗಾಜಿರುವ ಗಡಿಯಾರವನ್ನು ಎಂದೂ ಮನೆಯಲ್ಲಿ ಹಾಕಬೇಡಿ. ಇದು ಕುಟುಂಬದ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ.
ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಗಡಿಯಾರ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಈ ಮೂರರಲ್ಲಿ ಯಾವುದಾದ್ರೂ ದಿಕ್ಕಿನಲ್ಲಿ ಗಡಿಯಾರವನ್ನಳವಡಿಸಬೇಕು.
ಕೊಠಡಿಯ ಬಾಗಿಲಿನಿಂದ ಮನುಷ್ಯನೊಂದೇ ಅಲ್ಲ ಪ್ರಕೃತಿಯ ಶಕ್ತಿ ಪ್ರವೇಶ ಮಾಡುತ್ತದೆ. ಕೊಠಡಿ ಬಾಗಿಲ ಮೇಲೆ ಗಡಿಯಾರ ಹಾಕುವುದು ಮಂಗಳಕರವಲ್ಲ. ಈ ಮನೆಯಲ್ಲಿ ಖುಷಿ ಪ್ರವೇಶ ಮಾಡುವುದಿಲ್ಲ.
ದಕ್ಷಿಣ ದಿಕ್ಕು ಯಮನ ಮಾರ್ಗವೆಂದು ಪರಿಗಣಿಸಲಾಗಿದೆ. ಅರ್ಥಾತ್ ಸಾವಿನ ದಿಕ್ಕು. ಹಾಗಾಗಿ ಎಂದೂ ದಕ್ಷಿಣ ಭಾಗಕ್ಕೆ ಗಡಿಯಾರವನ್ನು ಹಾಕಬಾರದು.
ದೊಡ್ಡದಾದ, ನೋಡಲು ಸುಂದರವಾದ ಗಡಿಯಾರವನ್ನು ಹಾಕಬೇಕು. ಹಾಳಾದ, ಸಮಯ ತೋರಿಸದ ಗಡಿಯಾರವನ್ನು ಎಂದೂ ಹಾಕಬೇಡಿ. ಇದು ಅವನತಿಗೆ ಕಾರಣವಾಗುತ್ತದೆ.
ಗಡಿಯಾರ ಸರಿ ಸಮಯ ಅಥವಾ 3-4 ನಿಮಿಷ ಮುಂದಿರಬೇಕು. ಹಿಂದಿದ್ದಲ್ಲಿ ಜೀವನದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ. ದೈನಂದಿನ ಕಾರ್ಯದಲ್ಲಿ ತೊಂದರೆಯಾಗುತ್ತದೆ.